News Hour ಹಿಂದಿ ಪರವಾಗಿ ಅಮಿತ್ ಶಾ ಹೇಳಿಕೆಗೆ ರಾಜ್ಯದಲ್ಲಿ ಆಕ್ರೋಶ, ಮುಗಿಯದ ಹಿಜಾಬ್ ದಂಗಲ್!

ಹಿಂದಿ ಭಾಷೆಯ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ, ಅಮಿತ್ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಸಂಪುಟ ಸರ್ಕಸ್ ಇನ್ನೂ ಮುಂದುವರಿದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ.8): ಮುಸ್ಕಾನ್ ಖಾನ್ (Muskan Khan) ಕುರಿತಾಗಿ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಬರೆದ ಕವನ ರಾಜ್ಯದಲ್ಲಿ ಕಿಚ್ಚು ಹಬ್ಬಿಸಿದೆ. ಹಿಜಾಬ್ (Hijab) ದಂಗಲ್ ವಿಚಾರದಲ್ಲಿ ಎಲ್ಲರೂ ಬಿಜೆಪಿಗೆ ಹಾಗೂ ಹಿಂದು ಸಂಘಟನೆಗಳಿಗೆ ಬುದ್ಧಿ ಹೇಳಲು ಬರ್ತಿದ್ದಾರೆ. ಆದರೆ, ಇದೇ ವಿಪಕ್ಷಗಳು ವಿದ್ಯಾರ್ಥಿನಿಯರಿಗೆ ಯಾಕೆ ಬುದ್ಧಿ ಹೇಳುವ ಕೆಲಸ ಮಾಡೋದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಪ್ರಶ್ನೆ ಮಾಡಿದ್ದಾರೆ.

ಇದರ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಇಂಗ್ಲೀಷ್ ಬದಲಿಗೆ ರಾಜ್ಯ ರಾಜ್ಯಗಳ ನಡುವಿನ ನಾಗರೀಕರು ಹೆಚ್ಚಾಗಿ ಹಿಂದಿಯಲ್ಲೇ ವ್ಯವಹರಿಸಲಿ ಎಂದು ಹೇಳಿರುವುದು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ(siddaramaiah ) , ಇದು ಮಾತೃಭಾಷೆಗಳಿಗೆ ಮಾಡಿರುವ ಅವಮಾನ ಎಂದು ಹೇಳಿದ್ದಲ್ಲದೆ, ಈ ಕೂಡಲೇ ಅಮಿತ್ ಶಾ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು. ಇದು ಘರ್ಷಣೆಗೆ ಎಡೆ ಮಾಡಿಕೊಡುವ ಹೇಳಿದೆ ಎಂದು ಕಿಡಿಕಾರಿದ್ದಾರೆ.

ಅಮಿತ್ ಶಾ ಹೇಳಿಕೆ ಸಾಂಸ್ಕೃತಿಕ ಭಯೋತ್ಪಾದನೆ ಎಂದ ಸಿದ್ದರಾಮಯ್ಯ

ಇನ್ನೊಂದೆಡೆ, ರಾಜ್ಯದಲ್ಲಿ ಸಂಪುಟ ಸೀಕ್ರೆಟ್ ಮುಂದುವರಿದಿದೆ. ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿದ್ದಾಗ ಕ್ಯಾಬಿನೆಟ್ ಕುರಿತಾಗಿ ಸ್ಪಷ್ಟ ನಿರ್ಣಯ ತೆಗೆದುಕೊಂಡೇ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದ್ಯಾವುದು ಆಗಿರಲಿಲ್ಲ. ಒಟ್ಟಾರೆ ರಾಜ್ಯದಲ್ಲಿನ್ನೂ ಸಂಪುಟ ಸರ್ಕಸ್ ಮುಗಿಯುವ ಹಾಗೆ ಕಾಣುತ್ತಿಲ್ಲ.

Related Video