Asianet Suvarna News Asianet Suvarna News

ಪ್ರತಾಪ್ ಸಿಂಹ VS ರೋಹಿಣಿ ಸಿಂಧೂರಿ ಪತ್ರ ಸಮರ: 41 ಕೋಟಿ ರೂ ಲೆಕ್ಕ ಕೊಟ್ಟ ಡೀಸಿ

- ಸಂಸದ ಪ್ರತಾಪ್ ಸಿಂಹ, ಡೀಸಿ ರೋಹಿಣಿ ಸಿಂಧೂರಿ ಪತ್ರ ಸಮರ 

- ಡೀಸಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ

- ಪ್ರತಾಪ್ ಸಿಂಹ ಪ್ರಶ್ನೆಗೆ ಉತ್ತರ ಕೊಟ್ಟ ಸಿಂಧೂರಿ

May 31, 2021, 10:24 AM IST

ಮೈಸೂರು (ಮೇ. 31): ಸಂಸದ ಪ್ರತಾಪ್ ಸಿಂಹ ಡೀಸಿ ರೋಹಿಣಿ ಸಿಂಧೂರಿ ಪತ್ರ ಸಮರ ಮುಂದುವರೆದಿದೆ. ರೋಹಿಣಿ ಸಿಂಧೂರಿ ಕಾರ್ಯ ವೈಖರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪ್ರತಾಪ್ ಸಿಂಹ ಪತ್ರಕ್ಕೆ ರೋಹಿಣಿ ಸಿಂಧೂರಿ ಪ್ರೆಸ್‌ನೋಟ್ ಬಿಡುಗಡೆ ಮಾಡಿದ್ದಾರೆ.

ಬಂಡಾಯಕ್ಕೆ ಡೋಂಟ್ ಕೇರ್, ಕೊರೋನಾ ಕಾಯಕವೊಂದೇ ಗುರು, ವಿರೋಧಿಗಳಿಗೆ ಬಿಎಸ್‌ವೈ ಟಕ್ಕರ್

'ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ತರಲು ನಾನು ಪ್ರಯತ್ನಿಸುತ್ತಿದ್ದೇನೆ. 36 ಕೋಟಿಯನ್ನು ಕೋವಿಡ್ ನಿಯಂತ್ರಣಕ್ಕೆ ಖರ್ಚು ಮಾಡಿದ್ದೇವೆ. ಯಾರು ಬೇಕಾದರೂ ಲೆಕ್ಕ ನೋಡಬಹುದು. ಬೇಕಾದ್ರೆ ಆಡಿಟ್ ಮಾಡಿಸಿ. ನಮ್ಮ ಜಿಲ್ಲೆ ಕೋವಿಡ್ ಮಿತ್ರ ರಾಜ್ಯಕ್ಕೆ ಮಾದರಿಯಾಗಿದೆ. ಜುಲೈ 1 ಕ್ಕೆ ಮೈಸೂರನ್ನು ಕೋವಿಡ್ ಮುಕ್ತ ಮಾಡುತ್ತೇವೆ' ಎಂದು ರೋಹಿಣಿ ಸಿಂಧೂರಿ ಹೇಳಿದ್ಧಾರೆ.