Asianet Suvarna News Asianet Suvarna News

ಧ್ವಜಾರೋಹಣ ವೇಳೆ ಜಿಗಜಿಣಗಿ ಮುನಿಸು, ನಿರೂಪಕನಿಗೆ ತರಾಟೆ, ಮನವೊಲಿಸಿದ ಶಶಿಕಲಾ ಜೊಲ್ಲೆ

 ಧ್ವಜಾರೋಹಣ ಸಮಾರಂಭದ ವೇಳೆ ತಮ್ಮ ಹೆಸರನ್ನು ಹೇಳದಿದ್ದಕ್ಕೆ ಸಂಸದ ರಮೇಶ್ ಜಿಗಜಿಣಗಿ ಮುನಿಸಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

Aug 15, 2021, 1:24 PM IST

ಬೆಂಗಳೂರು (ಆ. 15): ಧ್ವಜಾರೋಹಣ ಸಮಾರಂಭದ ವೇಳೆ ತಮ್ಮ ಹೆಸರನ್ನು ಹೇಳದಿದ್ದಕ್ಕೆ ಸಂಸದ ರಮೇಶ್ ಜಿಗಜಿಣಗಿ ಮುನಿಸಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಹೀಗಾಗಿ ಪ್ರಶಸ್ತಿ ವಿತರಿಸಲು ನಿರಾಕರಿಸಿದರು. ನಿರೂಪಕನಿಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು ತರಾಟೆಗೆ ತೆಗೆದುಕೊಂಡರು. ಕೊನೆಗೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಜಿಗಜಿಣಗಿ ಮನವೊಲಿಸಿದರು.

ಸ್ವತಂತ್ರೋತ್ಸವ ಭಾಷಣದಲ್ಲಿ 11 ಅಮೃತ ಮಹೋತ್ಸವ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ