ಸ್ವತಂತ್ರೋತ್ಸವ ಭಾಷಣದಲ್ಲಿ 11 ಅಮೃತ ಮಹೋತ್ಸವ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

ಸ್ವಾತಂತ್ರೋತ್ಸವದ ಅಮೃತೋತ್ಸವದ ನೆನಪಿಗಾಗಿ 11 ವಿಶೇಷ ಕಾರ್ಯಕ್ರಮಗಳ ಘೋಷಣೆ ಮಾಡಿದರು.  11 ಯೋಜನೆಗಳಿಗೆ 720 ಕೋಟಿ ರೂ ಮೀಸಲಿಟ್ಟಿದ್ದಾರೆ. 

First Published Aug 15, 2021, 12:38 PM IST | Last Updated Aug 15, 2021, 12:38 PM IST

ಬೆಂಗಳೂರು (ಆ. 15): ಇಂದು 75 ನೇ ಸ್ವಾತಂತ್ರ್ಯ ದಿವಸದ ಸಂಭ್ರಮ.  ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಸಿಎಂ ಬೊಮ್ಮಾಯಿ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದರು. 

Independence Day: ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ, ಸಿಎಂ ಭಾಷಣದ ಪ್ರಮುಖ ಅಂಶಗಳಿವು

'ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಮೋದಿ ನೇತೃತ್ವದಲ್ಲಿ 7 ವರ್ಷಗಳಲ್ಲಿ ದೇಶ ಪ್ರಗತಿಯ ಹೊಸ ಮಜಲು ತಲುಪಿದೆ. ಭಾಷೆ, ಸಂಸ್ಕೃತಿ, ಶಿಕ್ಷಣ, ಕಲೆ, ಆರ್ಥಿಕತೆ, ವಾಣಿಜ್ಯೋದ್ಯಮ, ಉದ್ಯೋಗ ಸೃಷ್ಟಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಿದೆ' ಎಂದರು. ಸ್ವಾತಂತ್ರೋತ್ಸವದ ಅಮೃತೋತ್ಸವದ ನೆನಪಿಗಾಗಿ 11 ವಿಶೇಷ ಕಾರ್ಯಕ್ರಮಗಳ ಘೋಷಣೆ ಮಾಡಿದರು.  11 ಯೋಜನೆಗಳಿಗೆ 720 ಕೋಟಿ ರೂ ಮೀಸಲಿಟ್ಟಿದ್ದಾರೆ. ಅಮೃತ ಕೌಶಲ್ಯ ತರಬೇತಿ ಯೋಜನೆ. ಅಂಗನವಾಡಿ, ಶಾಲಾ ಸೌಲಭ್ಯ ಯೋಜನೆ, ಅಮೃತ ಸ್ವಸಹಾಯ ಕಿರು ಉದ್ದಿಮೆಗಳು ಸೇರಿದಂತೆ 11 ಯೋಜನೆಗಳನ್ನು ಘೋಷಿಸಿದ್ದಾರೆ.