ಕೊರೋನಾ ಟೆಸ್ಟ್ ಮಾಡಲು ಮನೆಗೇ ಬರುತ್ತೆ BBMP ತಂಡ

ಮನೆ ಮನೆಗೆ ತೆರಳಿ ಹಿರಿಯ ನಾಗರಿಕರ ಟೆಸ್ಟ್ ಮಾಡಲು ಬಿಬಿಎಂಪಿ ಮುಂದಾಗಿದೆ. ರಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲು 8 ಕಂಟ್ರೋಲ್ ರೂಂಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿ ವಲಯದ ಕಂಟ್ರೋಲ್‌ ರೂಂಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.

First Published Jul 18, 2020, 2:35 PM IST | Last Updated Jul 18, 2020, 2:35 PM IST

ಬೆಂಗಳೂರು(ಜು.18): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದೆ. ಇದರ ಬೆನ್ನಲ್ಲೇ ಕೋವಿಡ್ ಪರೀಕ್ಷೆಯನ್ನು ಮತ್ತಷ್ಟು ಚುರುಕಾಗಿ ನಡೆಸಲು ಬಿಬಿಎಂಪಿ ಮೊಬೈಲ್ ಟೀಂ ಸಜ್ಜುಗೊಳಿಸಿದೆ.

ಮನೆ ಮನೆಗೆ ತೆರಳಿ ಹಿರಿಯ ನಾಗರಿಕರ ಟೆಸ್ಟ್ ಮಾಡಲು ಬಿಬಿಎಂಪಿ ಮುಂದಾಗಿದೆ. ರಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲು 8 ಕಂಟ್ರೋಲ್ ರೂಂಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿ ವಲಯದ ಕಂಟ್ರೋಲ್‌ ರೂಂಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಸೋಂಕಿತರಿಗೆ ಹೊಟೇಲ್ ಕ್ವಾರಂಟೈನ್

ಕೊರೋನಾ ಲಕ್ಷಣ ಇರುವವರು, ಹಿರಿಯ ನಾಗರಿಕರು ಕರೆ ಮಾಡಿದರೆ, ಅವರ ಮನೆ ಬಾಗಿಲಿಗೆ ಬಂದು ಕೋವಿಡ್ ಪರೀಕ್ಷೆ ಮಾಡಲು ಬಿಬಿಎಂಪಿ ಮುಂದಾಗಿದೆ. 115 ತಂಡಗಳು ನಗರದಾದ್ಯಂತ ಸಂಚರಿಸಿ ಪರೀಕ್ಷೆ ನಡೆಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.