Hijab Controversy : ಕೋರ್ಟ್ ಆದೇಶ ಬರೋವರೆಗೂ ಸಮವಸ್ತ್ರ ಸಂಹಿತೆ ಪಾಲಿಸಿ!

ನ್ಯಾಯಾಲಯದ ಆದೇಶ ಬರೋವರೆಗೂ ಸಮವಸ್ತ್ರ ಸಂಹಿತೆ ಪಾಲಿಸಿ
ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಪತ್ರ
ರಾಜ್ಯದಲ್ಲಿ ಮುಂದುವರಿದ ಹಿಜಾಬ್ ಹಗ್ಗಜಗ್ಗಾಟ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.4): ಉಡುಪಿಯಲ್ಲಿ (Udupi) ಆರಂಭಗೊಂಡ ಹಿಜಾಬ್ (Hijab) ಕಿತ್ತಾಟ ಈಗ ರಾಜ್ಯದ ಹಲವು ಭಾಗಗಳಿಗೂ ವ್ಯಾಪಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೂ ಒಳಗಾಗಿದೆ. ಇದರ ನಡುವೆ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ (Minority Commission Chairman Abdul Azeem) ಪತ್ರ ಬರೆದಿದ್ದು, ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ಸಮವಸ್ತ್ರ ಸಂಹಿತೆ ಪಾಲನೆ ಮಾಡಿ ಎಂದು ಹೇಳಿದ್ದಾರೆ.

Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್‌ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ
ಪ್ರಕರಣದಲ್ಲಿ ವಾದ ಪ್ರತಿವಾದ ಮುಂದುವರಿಯುತ್ತಿದೆ. ಇದರಿಂದಾಗಿ ಶಾಂತಿ ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಹಿಜಾಬ್ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದಿನ ಆದೇಶ ಬರುವವರೆಗೂ ಈಗಿರುವ ಸಮವಸ್ತ್ರ ಸಂಹಿತೆಯನ್ನು ಪಾಲಿಸಿ ಎಂದು ಪತ್ರದಲ್ಲಿ ಹೇಳಿದ್ದಾರೆ. ರಾಜ್ಯದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಅವರು ಈ ಪತ್ರವನ್ನು ಕಳುಹಿಸಿದ್ದಾರೆ. ಫೆ.8ರ ವರೆಗೂ ಕಾಲೇಜು ಯೂನಿಫಾರ್ಮ್ ಧರಿಸಿಯೇ ತೆರಳಬೇಕು ಎಂದು ಇದರಲ್ಲಿ ಹೇಳಲಾಗಿದೆ.

Related Video