Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ
* ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ ರೇಷಮ್ ಎಂಬ ವಿದ್ಯಾರ್ಥಿನಿ
* ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ಶಿಸ್ತು ಕ್ರಮ: ಶಾಸಕ ರಘುಪತಿ ಭಟ್ ಎಚ್ಚರಿಕೆ
* ಸರ್ಕಾರದ ಆದೇಶ ಪಾಲಿಸಬೇಕು: ರಹೀಂ ಉಚ್ಚಿಲ
ಬೆಂಗಳೂರು(ಫೆ.01): ಹಿಜಾಬ್(Hijab) ಧರಿಸುವುದು ಸಂವಿಧಾನದ ಮೂಲಭೂತ ಹಕ್ಕೆಂದು(Fundamental Right) ಘೋಷಿಸಬೇಕು ಹಾಗೂ ಹಿಜಾಬ್ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು(Muslim Student) ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ರೇಷಮ್ ಎಂಬ ವಿದ್ಯಾರ್ಥಿನಿ ಹೈಕೋರ್ಟ್‌ಗೆ(High Court) ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲ ಶಾಂತಬಿಷ್ ಶಿವಣ್ಣ ವಕಾಲತ್ತು ವಹಿಸಿದ್ದಾರೆ.
ಹಿಜಾಬ್ ಧರಿಸಲಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅರ್ಜಿದಾರರು ಸೇರಿದಂತೆ ಮುಸ್ಲಿಂ(Muslim) ಹೆಣ್ಣು ಮಕ್ಕಳಿಗೆ 2021ರ ಡಿ.28ರಿಂದ ಕಾಲೇಜು ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಅವರು ತರಗತಿಗಳಿಗೆ ಹಾಜರಾಗಲು ಅವಕಾಶವಾಗುತ್ತಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಧಾರ್ಮಿಕ ಆಚರಣೆಗಳನ್ನು(Religious Rituals) ಆಚರಿಸಲು ಭಾರತೀಯ ಸಂವಿಧಾನದಲ್ಲಿ(Constitution of India) ಅವಕಾಶವಿದೆ. ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Student Police Cadets ಹಿಜಾಬ್ ಧರಿಸಲು ಕೇರಳ ಸರ್ಕಾರ ನಕಾರ!
ಅಲ್ಲದೆ, ಹಿಜಾಬ್ ಧರಿಸುತ್ತಿರುವ ಕಾರಣಕ್ಕೆ ಕಾಲೇಜು ಪ್ರವೇಶ ನಿರ್ಬಂಧ ಹೇರಿರುವುದು ಸಂವಿಧಾನದ ನಿಯಮಗಳ ಉಲ್ಲಂಘನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸರ್ಕಾರ(Government of Karnataka) ರಾಜಕೀಯ ಪ್ರೇರಿತವಾಗಿ ಇಂತಹ ಕ್ರಮ ಅನುಸರಿಸುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಹಾಗೆಯೇ, ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸುವುದು ಸಂವಿಧಾನದ ಕಲಂ 14 ಮತ್ತು 25ರ ಅನ್ವಯ ಮೂಲಭೂತ ಹಕ್ಕು ಎಂಬುದಾಗಿ ಘೋಷಿಸಬೇಕು. ಹಿಜಾಬ್ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು(Educational Institutions) ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಹಿಜಾಬ್ ವಿವಾದ: ಚೆಂಡು ಪೋಷಕರ ಅಂಗಳಕ್ಕೆ
ಉಡುಪಿ(Udupi): ಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಹಿಜಾಬ್ ವಿವಾದದ ಚೆಂಡು ಇದೀಗ ವಿದ್ಯಾರ್ಥಿನಿಯರ ಪೋಷಕರ(Parents) ಅಂಗಳಕ್ಕೆ ಬಂದಿದೆ. ತಮ್ಮ ಮಕ್ಕಳು ಹಿಜಾಬ್ ಧರಿಸಿ ಅಥವಾ ಧರಿಸದೆ ಕಾಲೇಜಿಗೆ ಹೋಗುವ ಬಗ್ಗೆ ಫೋಷಕರು ಇಂದು(ಮಂಗಳವಾರ) ನಿರ್ಧಾರ ತಿಳಿಸಲಿದ್ದಾರೆ.
ನಿನ್ನೆ(ಸೋಮವಾರ) ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ವಿದ್ಯಾರ್ಥಿಗಳ ಪೋಷಕರ ಶಿಕ್ಷಣ ಸೇವಾ ಸಮಿತಿಗಳ ಜಂಟಿ ಸಭೆ, ಶಾಸಕರ ನೇತೃತ್ವದಲ್ಲಿ ಸಭೆ ನಡೆಯಿತು. ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ಪಟ್ಟು ಹಿಡಿದಿರುವ 6 ವಿದ್ಯಾರ್ಥಿನಿಯರಲ್ಲಿ 4 ವಿದ್ಯಾರ್ಥಿನಿಯರು ಮತ್ತವರು ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.
ಕಾಲೇಜಿನ ನಿಗದಿತ ಸಮವಸ್ತ್ರ ಧರಿಸುವಂತೆ ಸರ್ಕಾರದ ಆದೇಶ ಮತ್ತು ಸಮಿತಿಯ ತೀರ್ಮಾನ ಮಾಡಿದಂತೆ ಸಮವಸ್ತ್ರ ಧರಿಸಿ ಕಾಲೇಜಿಗೆ ಬರಬೇಕು. ಸಮವಸ್ತ್ರದ ಜೊತೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ. ಹಿಜಾಬ್ ಇಲ್ಲದೆ ಕಾಲೇಜಿಗೆ ಬರುವುದಾದರೆ ಬನ್ನಿ, ಇಲ್ಲದಿದ್ದರೇ ಬರಬೇಡಿ. ಇದನ್ನು ಧಿಕ್ಕರಿಸಿ ಹಿಜಾಬ್ ಧರಿಸಿ ಪ್ರವೇಶ ಮಾಡಿದ್ದಲ್ಲಿ ಇದನ್ನು ಅಶಿಸ್ತು ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ರಘುಪತಿ ಭಟ್(Raghupathi Bhat) ಎಚ್ಚರಿಕೆ ನೀಡಿದರು.
ಎರಡು ತಿಂಗಳಲ್ಲಿ ಅಂತಿಮ ಪರೀಕ್ಷೆಗಳು ಆರಂಭವಾಗಲಿದೆ. ಈ ಗೊಂದಲಗಳಿಂದ ತಮ್ಮ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ ಎಂದು ಕಾಲೇಜಿನ ಇತರ ಮಕ್ಕಳಿಂದ, ಪೋಷಕರಿಂದ ದೂರುಗಳು ಬಂದಿವೆ. ಶಿಸ್ತು ಪಾಲಿಸುವವರು ಕಾಲೇಜಿಗೆ ಬರಬಹುದು, ಇನ್ನು ಗೊಂದಲಕ್ಕೆ ಅವಕಾಶ ಇಲ್ಲ ಎಂದವರು ಸ್ಪಷ್ಟಪಡಿಸಿದರು.
ಮಂಗಳವಾರದಿಂದ ಕಾಲೇಜಿನ ಆವರಣದಲ್ಲಿ ಹಿಜಾಬ್ ವಿಷಯದಲ್ಲಿ ಗೊಂದಲ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ವಿಷಯದಲ್ಲಿ ಕಾಲೇಜು ಆವರಣಕ್ಕೆ ಮಾಧ್ಯಮಗಳು, ಸಂಘಸಂಸ್ಥೆ, ಸಂಘಟನೆಗಳಿಗೂ ಪ್ರವೇಶ ಇಲ್ಲ ಎಂದು ಅವರು ಹೇಳಿದರು
ಸಭೆಯ ಈ ತೀರ್ಮಾನಕ್ಕೆ ಒಬ್ಬ ಹಿಜಾಬ್ ಪರ ವಿದ್ಯಾರ್ಥಿನಿ ತೀವ್ರ ವಿರೋಧ ವ್ಯಕ್ತಪಡಿಸಿ, ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದಳು. ಆದರೆ, ಇತರ 3 ವಿದ್ಯಾರ್ಥಿನಿಯರ ಹೆತ್ತವರು ಮನೆಯ ಪುರುಷರ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದರು.
Hijab Controversy: ಕಾಲೇಜಲ್ಲಿ ಹಿಜಾಬ್ ನಿಷೇಧ ಬೇಡ: ಜಮಾತೆ ಇಸ್ಲಾಮಿ
ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು, ವಕ್ಫ್ ಬೋರ್ಡ್ ಅಧ್ಯಕ್ಷ ದಾವೂದ್ ಅಬೂಬಕ್ಕರ್, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು ಹಾಗೂ ಕಾಲೇಜಿನ ಉಪನ್ಯಾಸಕರು ಇದ್ದರು.
ಸರ್ಕಾರದ ಆದೇಶ ಪಾಲಿಸಬೇಕು: ರಹೀಂ ಉಚ್ಚಿಲ
ವಿದ್ಯಾರ್ಥಿಗಳು ಪ್ರಚಾರಕ್ಕಾಗಿ ಹಠ ಮಾಡುವುದು ಸರಿಯಲ್ಲ, ಹಿಜಾಬ್‌ಗೆ ನಮ್ಮ ವಿರೋಧ ಇಲ್ಲ, ಅದು ಇಸ್ಲಾಂನ ಪದ್ಧತಿ. ಆದರೆ ಶರಿಯತ್ ಆಧಾರಿತ ರಾಷ್ಟ್ರ ಬೇರೆ, ಪ್ರಜಾಪ್ರಭುತ್ವ(Democracy) ರಾಷ್ಟ್ರ ಬೇರೆ. ನಮ್ಮ ದೇಶದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು. ಇಂದು ಒಂದು ತೀರ್ಮಾನಕ್ಕೆ ಬರುವುದಾಗಿ ಮೂವರು ವಿದ್ಯಾರ್ಥಿನೀಯರು ಒಪ್ಪಿಕೊಂಡಿದ್ದಾರೆ ಎಂದು ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿದ್ದಾರೆ.