ಖಾಸಗಿ ಆಸ್ಪತ್ರೆ ಮೇಲೆ ಕ್ರಮ ಜರುಗಿಸಲು ಹಿಂದೇಟು ಹಾಕಲ್ಲ: ಸಚಿವ ಶ್ರೀರಾಮುಲು

ಸರ್ಕಾರದ ಆದೇಶ ಪಾಲನೆ ಮಾಡದ ಕೆಲವು ಖಾಸಗಿ ಆಸ್ಪತ್ರೆಗಳ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿದ್ದ ಸುವರ್ಣ ನ್ಯೂಸ್‌| ಸುವರ್ಣ ನ್ಯೂಸ್‌ ಬಯಲು ಮಾಡಿದ್ದ ವಿಚಾರವನ್ನ ಸರ್ಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ: ಸಚಿವ ಶ್ರೀರಾಮುಲು|

Share this Video
  • FB
  • Linkdin
  • Whatsapp

ಬೆಂಗಳೂರು(ಜು.30): ಖಾಸಗಿ ಆಸ್ಪತ್ರೆಗಳ ವರ್ತೆನಯನ್ನ ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ. ಸರ್ಕಾರದ ಆದೇಶ ಪಾಲನೆ ಮಾಡದ ಕೆಲವು ಖಾಸಗಿ ಆಸ್ಪತ್ರೆಗಳ ಬಗ್ಗೆ ಸುವರ್ಣ ನ್ಯೂಸ್‌ ರಹಸ್ಯ ಕಾರ್ಯಾಚರಣೆ ನಡೆಸಿತ್ತು.

ಕೊರೋನಾ ಕಷ್ಟದಲ್ಲಿ ಸುಲಿಗೆಗೆ ನಿಂತ ಖಾಸಗಿ ಹಾಸ್ಪಿಟಲ್ಸ್‌: ನಯ ವಂಚಕ ಆಸ್ಪತ್ರೆಗಳ ಅಸಲಿ ಬಣ್ಣ ಬಯಲು

ಸುವರ್ಣ ನ್ಯೂಸ್‌ ಬಯಲು ಮಾಡಿದ್ದ ವಿಚಾರವನ್ನ ಸರ್ಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಸುವರ್ಣ ನ್ಯೂಸ್‌ ತೋರಿಸಿದ ಆಸ್ಪತ್ರೆಗಳ ಮಾಹಿತಿಯನ್ನ ಪಟ್ಟಿ ಮಾಡಿಕೊಂಡಿದ್ದೇನೆ, ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

Related Video