ಬಡವರ ಬಂಧು, ಅಧಿಕಾರಿಗಳಿಗೆ ಖಡಕ್ ಬಾಸ್, ಪವರ್‌ಫುಲ್ ಸಚಿವ ಪ್ರಭು ಚೌಹಾಣ್..!

ಪ್ರಭು ಚೌಹಾಣ್,  ಬಿಎಸ್ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದಲ್ಲಿ ಇವರು ಪವರ್‌ಫುಲ್ ಸಚಿವರು. ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲೂ ನಿಸ್ಸೀಮರು. ಸರ್ಕಾರದಿಂದ ಜನರಿಗೆ ಸಿಗಬೇಕಾದ ನೆರವು ಸರಿಯಾಗಿ ಸಿಗುತ್ತಿಲ್ಲವೆಂದರೆ ಸಂಬಂಧಪಟ್ಟ ಅಧಿಕಾರಿಗಳ ಚಳಿ ಬಿಡಿಸ್ತಾರೆ. 

First Published Jul 7, 2021, 5:34 PM IST | Last Updated Jul 7, 2021, 5:49 PM IST

ಬೆಂಗಳೂರು (ಜು. 07): ಪ್ರಭು ಚೌಹಾಣ್,  ಬಿಎಸ್ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದಲ್ಲಿ ಇವರು ಪವರ್‌ಫುಲ್ ಸಚಿವರು. ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲೂ ನಿಸ್ಸೀಮರು. ಸರ್ಕಾರದಿಂದ ಜನರಿಗೆ ಸಿಗಬೇಕಾದ ನೆರವು ಸರಿಯಾಗಿ ಸಿಗುತ್ತಿಲ್ಲವೆಂದರೆ ಸಂಬಂಧಪಟ್ಟ ಅಧಿಕಾರಿಗಳ ಚಳಿ ಬಿಡಿಸ್ತಾರೆ.

ಬೀದರ್: ಸೋಯಾಬಿನ್ ಬಿತ್ತನೆ ಬೀಜ ಕೊರತೆ ನೀಗಿಸಿದ ಪ್ರಭು ಚೌಹಾಣ್

ಕೊರೋನಾ ಕಷ್ಟಕಾಲದಲ್ಲಿ ತಮ್ಮ ಕ್ಷೇತ್ರದ ಜನರಿಗೆ ಫುಟ್ ಕಿಟ್, ಆರೋಗ್ಯ ಸೇವೆ ಒದಗಿಸಿ, ಬಡವರ ಬಂಧು ಎನಿಸಿಕೊಂಡಿದ್ದಾರೆ. ಇನ್ನು ಪಶು ಸಂಗೋಪನಾ ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ರೆ ಅಧಿಕಾರಿಗಳಿಗೆ ಚಳಿ ಬಿಡಿಸ್ತಾರೆ. ಇದು ಪ್ರಭು ಚೌಹಾಣ್ ಸ್ಪೆಷಾಲಿಟಿ. ಇವರ ಕಾರ್ಯವೈಖರಿ, ಸಾಧನೆಗಳ ಬಗ್ಗೆ ಒಂದು ವರದಿ ಇಲ್ಲಿದೆ.