Asianet Suvarna News Asianet Suvarna News

ಡಯಾಲಿಸಿಸ್ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿದ್ದಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ನಾನು ಸಚಿವನಾಗುವ ಮೊದಲೇ ವ್ಯವಸ್ಥೆಯಲ್ಲಿ ಗೊಂದಲ ಇತ್ತು, ಬಿಜೆಪಿ ಸರ್ಕಾರ ಎರಡು ಏಜನ್ಸಿಗಳಿಗೆ ಕೊಟ್ಟಿತ್ತು, ಒಬ್ಬರು ಅರ್ಧದಲ್ಲೇ ಬಿಟ್ಟಿದ್ದರು. ಆ ಏಜನ್ಸಿ ನಿರ್ವಹಣೆ ಸರಿ ಇರಲಿಲ್ಲ, ಹಾಗಾಗಿ ಸಂಬಳ ಸರಿಯಾಗಿ ಕೊಟ್ಟಿರಲಿಲ್ಲ, ಇದೀಗ ಟೆಂಟರ್‌ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

ಮಂಗಳೂರು(ಡಿ.03):  ಡಯಾಲಿಸಿಸ್ ಸಿಬ್ಬಂದಿಯ ಸಮಸ್ಯೆಯ ಬಗ್ಗೆ ನಮಗೆ ಖಾಳಜಿ ಇದೆ. ಟೆಂಟರ್‌ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ಚೀನಾದಲ್ಲಿ ಇನ್‌ಫ್ಲುಯೆನ್ಜಾ, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಪೂರ್ವಸಿದ್ಧತೆ

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ನಾನು ಸಚಿವನಾಗುವ ಮೊದಲೇ ವ್ಯವಸ್ಥೆಯಲ್ಲಿ ಗೊಂದಲ ಇತ್ತು, ಬಿಜೆಪಿ ಸರ್ಕಾರ ಎರಡು ಏಜನ್ಸಿಗಳಿಗೆ ಕೊಟ್ಟಿತ್ತು, ಒಬ್ಬರು ಅರ್ಧದಲ್ಲೇ ಬಿಟ್ಟಿದ್ದರು. ಆ ಏಜನ್ಸಿ ನಿರ್ವಹಣೆ ಸರಿ ಇರಲಿಲ್ಲ, ಹಾಗಾಗಿ ಸಂಬಳ ಸರಿಯಾಗಿ ಕೊಟ್ಟಿರಲಿಲ್ಲ, ಇದೀಗ ಟೆಂಟರ್‌ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ ಅಂತ ತಿಳಿಸಿದ್ದಾರೆ.