Asianet Suvarna News Asianet Suvarna News

ಇಂದಿನಿಂದ ರಾಜ್ಯದಲ್ಲಿ ದುನಿಯಾ ಮತ್ತಷ್ಟು ದುಬಾರಿ: ಹಾಲು, ಹೋಟೆಲ್ ಶಾಕ್..ಹೆದ್ದಾರಿಗೆ ಹೊಸ ರೂಲ್ಸ್

ಒಂದಾದ ಮೇಲೊಂದು ಬೆಲೆ ಏರಿಕೆಗೆ ರಾಜ್ಯ ಜನ ಕಂಗಾಲಾಗಿದ್ದಾರೆ. ಇದರ ನಡುವೆಯೂ ಇಂದಿನಿಂದ ರಾಜ್ಯದ ಜನರಿಗೆ ಮತ್ತಷ್ಟು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಆಗಸ್ಟ್  ಮೊದಲ ದಿನದಿಂದಲೇ ರಾಜ್ಯದಲ್ಲಿ ಒಂದಷ್ಟು ಶಾಕಿಂಗ್ ಬೆಳವಣಿಗೆಗಳಿಗೆ ರಾಜ್ಯ ಸಾಕ್ಷಿಯಾಗಲಿದೆ.

First Published Aug 1, 2023, 10:15 AM IST | Last Updated Aug 1, 2023, 10:15 AM IST

ವಿದ್ಯುತ್, ತರಕಾರಿ ಬೆಲೆ ಏರಿಕೆ ನಡುವೆ ಲೀಟರ್ ನಂದಿನಿ ಹಾಲಿನ ದರದಲ್ಲಿ(Milk price) ಕೆಎಂಎಫ್ 3 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಆದೇಶ ಇಂದಿನಿಂದಲೇ ಅಧಿಕೃತವಾಗಿ ಜಾರಿಗೆ ಬರ್ತಿದೆ. ಹಾಲಿನ ದರ ಹೆಚ್ಚಳದ ಜೊತೆಗೆ ದಿನಸಿ, ತರಕಾರಿ(Vegetables) ಕೂಡ ದುಬಾರಿಯಾಗಿದೆ. ಹೀಗಾಗಿ ಹೊಟೇಲ್ ಮಾಲೀಕರು(hotel) ಕೂಡ ಊಟ, ತಿಂಡಿ ದರ ಹೆಚ್ಚಳ ಮಾಡಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗುತ್ತಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೇಸ್ ವೇನಲ್ಲಿ ಅಪಘಾತಗಳು(Accidents) ಹೆಚ್ಚಾಗುತ್ತಿವೆ. ಇದನ್ನ ತಪ್ಪಿಸಲು ಪ್ಲಾನ್ ಮಾಡಲಾಗಿದ್ದು ಇಂದಿನಿಂದಲೇ ದಶಪಥ ಹೆದ್ದಾರಿಯಲ್ಲಿ ಬೈಕ್, ಆಟೋ ಸೇರಿ ತ್ರಿಚಕ್ರ ವಾಹನಗಳಿಗೆ ನಿಷೇಧ ಹೇರಲಾಗಿದೆ. ನಿಯಮ ಮೀರಿ ಸಂಚರಿಸಿದ್ರೆ 500 ರೂಪಾಯಿ ದಂಡ ವಿಧಿಸಲಾಗುತ್ತೆ.ಶಕ್ತಿ ಯೋಜನೆ ಎಫೆಕ್ಟ್ನಿಂದಾಗಿ ಕಾಂಟ್ರ್ಯಾಕ್ಟ್ಗೆ ಪಡೆಯುತ್ತಿದ್ದ ಬಸ್ಗಳ ದರ (bus) ಏರಿಕೆ ಕಂಡಿದೆ. ಅಗಸ್ಟ್ 1ರಿಂದಲೇ ಅನ್ವಯವಾಗುವಂತೆ ಬಸ್ಗಳ ದರ ಹೆಚ್ಚಿಸಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಇಂದಿನಿಂದ ಒಪ್ಪಂದದ ಮೇರೆಗೆ ಸರ್ಕಾರಿ ಬಸ್ ಪಡೆಯಲು ಹೆಚ್ಚು ಹಣ ಭರಿಸಬೇಕಾಗುತ್ತೆ.

ಇದನ್ನೂ ವೀಕ್ಷಿಸಿ:  ದಿಲ್ಲಿ ಅಂಗಳದಲ್ಲಿ ಕರ್ನಾಟಕ ರಾಜಕೀಯ ಚದುರಂಗ: ‘ಲೋಕ’ ತಂತ್ರದ ಜೊತೆ ಸಂಘರ್ಷ ಶಮನದ ಜಪ