ದಿಲ್ಲಿ ಅಂಗಳದಲ್ಲಿ ಕರ್ನಾಟಕ ರಾಜಕೀಯ ಚದುರಂಗ: ‘ಲೋಕ’ ತಂತ್ರದ ಜೊತೆ ಸಂಘರ್ಷ ಶಮನದ ಜಪ

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ 
ಕಾಂಗ್ರೆಸ್ 2ನೇ ಸಭೆ, ಪತ್ರ ಸಮರದ ಬಗ್ಗೆ ಚರ್ಚೆ ಸಾಧ್ಯತೆ
ಸಚಿವರ ಕಾರ್ಯವೈಖರಿ, ಶಾಸಕರ ದೂರಿನ ಬಗ್ಗೆ ಚರ್ಚೆ
 

Share this Video
  • FB
  • Linkdin
  • Whatsapp

ಕರ್ನಾಟಕ ಬ್ಯಾಟಲ್ ಆಯ್ತು ಈಗೇನಿದ್ರೂ ಲೋಕಸಭೆ (Loksabha) ಮಹಾ ಸಂಗ್ರಾಮ. ಹೆಚ್ಚು ಕಡಿಮೆ 9 ತಿಂಗಳಿರುವಾಗಲೇ ಲೋಕಸಮರಕ್ಕೆ ರಾಜ್ಯದಲ್ಲಿ ಕೈ-ಕಮಲ ಸಮರ ತಾಲೀಮು ಶುರುವಾಗಿದೆ. ಮಹಾ ಸಂಗ್ರಾಮದ ಜಿದ್ದಿಗೆ ಬಿದ್ದಿರುವ ಬಿಜೆಪಿ, ಕಾಂಗ್ರೆಸ್(Congress) ಪಕ್ಷಗಳು ಅದಕ್ಕೂ ಮೊದಲು ಪಕ್ಷದಲ್ಲಿನ ಆಂತರಿಕ ಸಂಘರ್ಷ, ಪಕ್ಷ ಸಂಘಟನಾ ಚಟುವಟಿಕೆಗಿಳಿದಿವೆ. ಈ ಬೆಳವಣಿಗೆಯಲ್ಲಿನ ಕ್ಲೈಮ್ಯಾಕ್ಸ್ ಗೋಲ್ ಹೈಕಮಾಂಡ್ ಅಂಗಳಕ್ಕೆ ಶಿಫ್ಟ್ ಆಗಿದೆ. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಎರಡೆರಡು ಸಭೆ(Meeting) ನಿಗದಿ ಮಾಡಿದ್ದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ(Siddaramaiah) ಸರ್ಕಾರ ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಸಚಿವರು ಮತ್ತು ಶಾಸಕರ ನಡುವೆ ಭಿನ್ನಾಭಿಪ್ರಾಯದ ಅಲೆ ಎದ್ದಿದೆ. 20ಕ್ಕೂ ಹೆಚ್ಚು ಸಚಿವರ ವಿರುದ್ಧ 30 ಶಾಸಕರು ಬರೆದ ಅಸಮಾಧಾನದ ಪತ್ರ ಬಿರುಗಾಳಿ ಎಬ್ಬಿಸಿದೆ. ಈಗಾಗಲೇ ಒಂದು ಹಂತದಲ್ಲಿ ಸಿಎಲ್‌ಪಿ ಸಭೆಯಲ್ಲಿ(CLP Meeting) ಸಂಧಾನ ಸಭೆಯೂ ನಡೆದಿದೆ. ಆದ್ರೆ ಸಭೆ ಬಳಿಕವೂ ನಡೆದ ಸಚಿವ ಪರಮೇಶ್ವರ್ ಮತ್ತು ಶಾಸಕ ಬಿ.ಆರ್. ಪಾಟೀಲ್ ನಡುವಿನ ವಾಕ್ಸಮರ ಕಾಂಗ್ರೆಸ್‌ನಲ್ಲಿನ ಗೊಂದಲ ಜೀವಂತವಿರಿಸಿದೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

Related Video