Asianet Suvarna News Asianet Suvarna News

ಕೆಲಸವೂ ಇಲ್ಲ, ಹಣವೂ ಇಲ್ಲ; ಬೆಂಗಳೂರು ಬಿಟ್ಟು ಊರು ಸೇರುತ್ತಿದ್ದಾರೆ ಜನ

Jul 14, 2020, 12:09 PM IST

ಬೆಂಗಳೂರು (ಜು. 14): ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲಾಕ್‌ಡೌನ್ ಬಿಸಿ ಶುರುವಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ರಾಜಧಾನಿ ಸಂಪೂರ್ಣ ಸ್ಥಬ್ಧವಾಗಲಿದೆ. ಇಲ್ಲಿ ಸದ್ಯಕ್ಕೆ ಕೆಲಸವೂ ಇಲ್ಲ. ದುಡ್ಡೂ ಇಲ್ಲ. ಮನೆ ಬಾಡಿಗೆ ಕಟ್ಟುವುದು ಹೇಗೆ? ನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಎಂದು ಗಂಟುಮೂಟೆ ಸಮೇತ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಕೆಲವರು ಸ್ವಂತ ವಾಹನಗಳಲ್ಲಿ ಹೋದರೆ ಇನ್ನು ಕೆಲವರು ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿ ಹೋಗುತ್ತಿದ್ದಾರೆ. 

ಬೆಂಗಳೂರಿನಿಂದ ಊರುಗಳಿಗೆ ಮಹಾ ವಲಸೆ ಶುರುವಾಗಿದೆ ಎನ್ನಬಹುದು. ಜನರಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗುವ ಧಾವಂತವನ್ನು ನೋಡಬಹುದಾಗಿದೆ. ಗೋರಗುಂಟೆ ಪಾಳ್ಯದ ದೃಶ್ಯಗಳಿವು..!

ಲಾಕ್‌ಡೌನ್ ಬಿಸಿ: ಬೆಂಗಳೂರಿನಿಂದ ಗಂಟು ಮೂಟೆ ಸಮೇತ ಊರು ಸೇರುತ್ತಿದ್ದಾರೆ ಜನ