Asianet Suvarna News Asianet Suvarna News

ಲಾಕ್‌ಡೌನ್ ಬಿಸಿ: ಬೆಂಗಳೂರಿನಿಂದ ಗಂಟು ಮೂಟೆ ಸಮೇತ ಊರು ಸೇರುತ್ತಿದ್ದಾರೆ ಜನ

ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲಾಕ್‌ಡೌನ್ ಬಿಸಿ ಶುರುವಾಗಲಿದೆ ಇನ್ನೊಂದು ಕಡೆ ಬೆಳ್ಳಂಬೆಳಿಗ್ಗೆ ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುವ ಧಾವಂತ ಮಾಡುತ್ತಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮೆಜೆಸ್ಟಿಕ್ ತುಂಬಾ ಜನವೋ ಜನ. ಹೆದ್ದಾರಿಗಳಲ್ಲಿ ಸಾಲು ಸಾಲು ವಾಹನ ಇದು ಬೆಂಗಳೂರಿನ ಸಾಮಾನ್ಯ ದೃಶ್ಯವಾಗಿದೆ. 

First Published Jul 14, 2020, 11:38 AM IST | Last Updated Jul 14, 2020, 11:51 AM IST

ಬೆಂಗಳೂರು (ಜು. 14): ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲಾಕ್‌ಡೌನ್ ಬಿಸಿ ಶುರುವಾಗಲಿದೆ ಇನ್ನೊಂದು ಕಡೆ ಬೆಳ್ಳಂಬೆಳಿಗ್ಗೆ ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುವ ಧಾವಂತ ಮಾಡುತ್ತಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮೆಜೆಸ್ಟಿಕ್ ತುಂಬಾ ಜನವೋ ಜನ. ಹೆದ್ದಾರಿಗಳಲ್ಲಿ ಸಾಲು ಸಾಲು ವಾಹನ ಇದು ಬೆಂಗಳೂರಿನ ಸಾಮಾನ್ಯ ದೃಶ್ಯವಾಗಿದೆ. 

ಕೈಗೆ ಕೆಲಸವೂ ಇಲ್ಲ, ತಿನ್ನಲೂ ಅನ್ನವೂ ಇಲ್ಲದೇ ಊರುಗಳಿಗೆ ತೆರಳುತ್ತಿದ್ದಾರೆ. ಸದ್ಯ ಒಂದು ವಾರ ಮಾತ್ರ ಲಾಕ್‌ಡೌನ್ ಘೋಷಿಸಲಾಗಿದೆ. ಇದು ಮುಂದುವರೆಯುತ್ತದೋ, ಇಲ್ವಾ ಅನ್ನೋದು ಖಚಿತ ಇಲ್ಲ. ಹಾಗಾಗಿ ತಮ್ಮ ಊರುಗಳಿಗೆ ತೆರಳಿ ಸೇಫ್ ಆಗಿರೋಣ ಅಂತ ಜನ ವಲಸೆ ಹೋಗುತ್ತಿದ್ದಾರೆ. ಮೆಜೆಸ್ಟಿಕ್‌ನ ಚಿತ್ರಣ ಹೀಗಿದೆ ನೋಡಿ..!

1 ವಾರದ ನಂತರ ಲಾಕ್ಡೌನ್ ಮುಂದುವರೆಯುತ್ತಾ? ಸಿಎಂ ಕೊಟ್ಟ ಸ್ಪಷ್ಟನೆ ಇದು