ಚಿಕ್ಕಬಳ್ಳಾಪುರ ಆರೋಗ್ಯ ಮೇಳ ವಿಶ್ವದಾಖಲೆ, ಒಂದೂವರೆ ಲಕ್ಷ ಜನರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ

 ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಡಾ.ಕೆ.ಸುಧಾಕರ್‌ ಫೌಂಡೇಷನ್‌ ಶನಿವಾರದಿಂದ ಆಯೋಜಿಸಿರುವ ಎರಡು ದಿನಗಳ ಮೆಗಾ ಆರೋಗ್ಯ ಮೇಳ ಹೊಸ ವಿಶ್ವದಾಖಲೆ ಬರೆದಿದೆ. 2 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಗೊಳಗಾಗುವ ಮೂಲಕ ಲಂಡನ್‌ ವಲ್ಡ್‌ರ್‍ ಬುಕ್‌ ಆಫ್‌ ರೆಕಾರ್ಡ್ಸ್ಗೆ ಈ ಮೇಳ ಸೇರ್ಪಡೆಯಾಗಿದೆ.

Share this Video
  • FB
  • Linkdin
  • Whatsapp

 ಚಿಕ್ಕಬಳ್ಳಾಪುರ (ಮೇ. 15): ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಡಾ.ಕೆ.ಸುಧಾಕರ್‌ ¶ೌಂಡೇಷನ್‌ ಶನಿವಾರದಿಂದ ಆಯೋಜಿಸಿರುವ ಎರಡು ದಿನಗಳ ಮೆಗಾ ಆರೋಗ್ಯ ಮೇಳ ಹೊಸ ವಿಶ್ವದಾಖಲೆ ಬರೆದಿದೆ. 2 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಗೊಳಗಾಗುವ ಮೂಲಕ ಲಂಡನ್‌ ವಲ್ಡ್‌ರ್‍ ಬುಕ್‌ ಆಫ್‌ ರೆಕಾರ್ಡ್ಸ್ಗೆ ಈ ಮೇಳ ಸೇರ್ಪಡೆಯಾಗಿದೆ.

ಬೃಹತ್‌ ಆರೋಗ್ಯ ಶಿಬಿರಕ್ಕೆ ಆನ್‌ಲೈನ್‌ನಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. 14 ಖಾಸಗಿ ವೈದ್ಯಕೀಯ ಕಾಲೇಜು, 20 ಖಾಸಗಿ ಆಸ್ಪತ್ರೆ, 12 ಕಣ್ಣಿನ ಆಸ್ಪತ್ರೆಗಳೂ ಸೇರಿದಂತೆ ಹಲವು ಸಂಸ್ಥೆಗಳ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು. ಸಾವಿರಾರು ವೈದ್ಯರು, ನರ್ಸ್‌ಗಳು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ವಿಶೇಷ ತಜ್ಞರು ಸೇರಿದಂತೆ 5000ಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡು ಜನತೆಗೆ ಬೆಳಗ್ಗೆಯಿಂದ ಸಂಜೆಯವರೆಗೂ ತಾಳ್ಮೆಯಿಂದ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಇದ್ದವರಿಗೆ ಸ್ಥಳದಲ್ಲಿಯೇ ಉಚಿತವಾಗಿ ವೈದ್ಯೋಪಚಾರ ನೀಡಿ ಔಷಧಗಳನ್ನು ವಿತರಿಸಿದರು.

60 ಸೆಕೆಂಡ್ಸ್ ವಿತ್ ಅಶ್ವತ್ಥನಾರಾಯಣ: ಬಿಜೆಪಿ ಅಜೆಂಡಾ ಹಿಂದುತ್ವವಾ.? ಅಭಿವೃದ್ಧಿಯಾ.?

ಚಿಕ್ಕಬಳ್ಳಾಪುರ ಬೃಹತ್‌ ಆರೋಗ್ಯ ಮೇಳಕ್ಕೆ ಆನ್‌ಲೈನ್‌ನಲ್ಲೇ 1.50 ಲಕ್ಷ ನೋಂದಣಿಯಾಗಿದೆ ಎಂಬುದು ಅಚ್ಚರಿಯ ಸಂಗತಿ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆದ ಆರೋಗ್ಯ ಮೇಳಗಳಲ್ಲಿ ಇದುವರೆಗೂ 73 ಸಾವಿರ ಮಂದಿ ನೋಂದಣಿ ಆಗಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಚಿಕ್ಕಬಳ್ಳಾಪುರ ಆರೋಗ್ಯ ಮೇಳದಲ್ಲಿ ಮೊದಲ ದಿನವೇ 2 ಲಕ್ಷಕ್ಕೂ ಅಧಿಕ ಮಂದಿ ತಪಾಸಣೆಗೊಳಗಾಗಿದ್ದಾರೆ. ಎರಡನೇ ದಿನವೂ ದೊಡ್ಡ ಪ್ರಮಾಣದಲ್ಲಿ ಜನ ಆಗಮಿಸುವ ನಿರೀಕ್ಷೆಯಿದೆ.

Related Video