ಆ ಪ್ರಶಸ್ತಿಗಾಗಿ ಗುರಿ ಇಟ್ಟ ಕೆಜಿಎಫ್ 'ಕಿರಾತಕ': ಯಶ್19 ಸಿನಿಮಾ ಲೇಟ್ ಆಗೋಕೆ ಇದೇ ಕಾರಣನಾ ?
ಆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರಾ ಕೆಜಿಎಫ್ ಕಿಂಗ್..?
'ಯಶ್19' ಲೇಟ್ ಆಗುತ್ತಿರೋದಕ್ಕೆ ಕಾರಣ ಇಲ್ಲಿದೆ..!
ರಾಕಿಯ 19ನೇ ಚಿತ್ರದಲ್ಲಿ ಹಾಲಿವುಡ್ ಟೆಕ್ನೀಷಿಯನ್ಸ್..!
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ನಂತ್ರ ಮುಂದೇನು ಅನ್ನೋ ಪ್ರಶ್ನೆ ಪ್ಯಾನ್ ವರ್ಲ್ಡ್ ಪ್ರೇಕ್ಷಕರಲ್ಲಿ ಕಾಡ್ತಿದೆ. ಅದಕ್ಕೆ ಉತ್ತರ ಗಣೇಶ ಹಬ್ಬಕ್ಕೂ ಮೊದಲು ಯಶ್ 19ನೇ ಸಿನಿಮಾ(Yash 19 movie) ಅನೌನ್ಸ್ ಮಾಡ್ತಾರೆ. ಈ ಸಿನಿಮಾಗೆ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohan das) ಆ್ಯಕ್ಷನ್ ಕಟ್ ಹೇಳ್ತಾರೆ. ಹಾಲಿವುಡ್ ಟೆಕ್ನೀಷಿಯನ್ಸ್ ಕೆಲಸ ಮಾಡುತ್ತಿದ್ದಾರೆ ಅಂತ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಬ್ರೇಕ್ ಮಾಡಿತ್ತು. ಈಗ ಕೆಜಿಎಫ್(KGF) ಕಿರಾತಕ ತನ್ನ 19ನೇ ಸಿನಿಮಾಗೆ ಯಾರೂ ಊಹೆ ಮಾಡದ ರೀತಿ ಯೋಚನೆ ಮತ್ತು ಯೋಜನೆ ರೂಪಿಸಿದ್ದಾರೆ. ರಾಕಿಯ ಈ ಡ್ರೀಮ್ ಪ್ರಾಜೆಕ್ಟ್ ಗಾಗಿ ಸ್ಯಾಂಡಲ್‌ವುಡ್ ಮಾಲಿವುಡ್, ಹಾಲಿವುಡ್ ಸಿನಿ ರಂಗ ಒಂದು ಮಾಡಿದ್ದಾರೆ. ಅದರ ಹಿಂದಿರೋದು ಯಶ್ ಆ ಪ್ರಶಸ್ತಿ ಗೆಲ್ಲಬೇಕು ಅನ್ನೋ ಗುರಿ. ಅನ್ನೋ ವಿಚಾರ ಹೊರ ಬರುತ್ತಿದೆ. ಈ ಭಾರಿ ವಿಶ್ವ ಸಿನಿ ರಂಗದ ಪ್ರತಿಷ್ಠಿತ ಆಸ್ಕರ್ ಅವಾರ್ಡ್ಗೆ ಮುತ್ತಿಡಬೇಕು ಅನ್ನೋ ದೊಡ್ಡ ಗುರಿ.. ಇದೇ ಕಾರಣಕ್ಕೆ ಯಶ್ 19 ಸಿನಿಮಾ ಅನೌನ್ಸ್ ತಡವಾಗ್ತಿದೆಯಂತೆ.
ಇದನ್ನೂ ವೀಕ್ಷಿಸಿ: News 360°: ಮತ್ತೊಂದು ಚುನಾವಣಾ ಸಮೀಕ್ಷೆ ಬಹಿರಂಗ: 2024ರಲ್ಲಿ ಗೆದ್ದು ದೇಶದ ಗದ್ದುಗೆ ಏರೋದ್ಯಾರು?