ಮಾಸ್ಕ್ ಹಾಕಲ್ಲ, ಏನೀಗ? ಸೂಪರ್ ಮಾರ್ಕೆಟ್‌ನಲ್ಲಿ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಕಿರಿಕ್

- ಮಂಗಳೂರಿನ ಖ್ಯಾತ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯರಿಂದ ಕೊರೊನಾ ನಿಯಮ ಉಲ್ಲಂಘನೆ- ಮಾಸ್ಕ್ ಹಾಕದೇ ಸೂಪರ್ ಮಾರ್ಕೆಟ್‌ಗೆ ಬಂದ ವೈದ್ಯ- ಮಾಸ್ಕ್ ಹಾಕ್ಕೊಳಲ್ಲ, ಸರ್ಕಾರದ ದಡ್ಡ ನಿಯಮ ಪಾಲಿಸಲ್ಲ ಎಂದು ಉಢಾಪೆ ವರ್ತನೆ 

Share this Video
  • FB
  • Linkdin
  • Whatsapp

ಮಂಗಳೂರು (ಮೇ. 19): ಮಾಸ್ಕ್ ಹಾಕಿಕೊಳ್ಳಿ, ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಾದ ವೈದ್ಯರೇ, ಮಾಸ್ಕ್ ಹಾಕಿಕೊಳ್ಳದೇ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. 

ಕೊರೊನಾ ಗುಡ್‌ನ್ಯೂಸ್ : ರಷ್ಯಾದ ಸ್ಪುಟ್ನಿಕ್ ಲಸಿಕೆ ಧಾರವಾಡದಲ್ಲಿ ಉತ್ಪಾದನೆ

ನಗರದ ಪ್ರಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಾಸ್ಕ್ ಧರಿಸದೇ ಸೂಪರ್‌ ಮಾರ್ಕೆಟ್‌ಗೆ ಬಂದಿದ್ದರು. ಮಾಸ್ಕ್ ಧರಿಸದೇ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದಾಗ, ನಾನು ಸರ್ಕಾರದ ದಡ್ಡ ನಿಯಮಗಳನ್ನ ಫಾಲೋ ಮಾಡಲ್ಲ. ನಾನು ವಿಜ್ಞಾನ ಏನ್ ಹೇಳುತ್ತೋ ಅದನ್ನಷ್ಟೇ ಪಾಲಿಸ್ತೇನೆ ಎಂದು ಮೊಂಡು ವಾದ ಮಾಡಿದ್ದಾರೆ. ವೈದ್ಯರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

Related Video