Asianet Suvarna News Asianet Suvarna News

ಕೊರೊನಾ ಗುಡ್‌ನ್ಯೂಸ್: ರಷ್ಯಾದ ಸ್ಪುಟ್ನಿಕ್‌ ಲಸಿಕೆ ಧಾರವಾಡದಲ್ಲಿ ಉತ್ಪಾದನೆ

- ರಷ್ಯಾದ ಸ್ಪುಟ್ನಿಕ್‌ ಲಸಿಕೆ ಧಾರವಾಡದಲ್ಲಿ ಉತ್ಪಾದನೆ

- ಶೀಘ್ರದಲ್ಲೇ ಬೆಂಗಳೂರು ಆಸ್ಪತ್ರೆಗಳಲ್ಲೂ ಸ್ಪುಟ್ನಿಕ್‌ ಲಸಿಕೆ ಲಭ್ಯ

- ಖಾಸಗಿ ಆಸ್ಪತ್ರೆಗಳಲ್ಲಿ 1 ಡೋಸ್‌ಗೆ 995.40 ರು. ಬೆಲೆ

ಬೆಂಗಳೂರು (ಮೇ. 19): ಕೊರೊನಾ ಬಗ್ಗೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿರುವಾಗ, ಗುಡ್‌ನ್ಯೂಸೊಂದು ಕೇಳಿ ಬಂದಿದೆ.  ವಿಶ್ವದ ಮೊದಲ ಕೋವಿಡ್‌ ಲಸಿಕೆ ಎಂಬ ಹಿರಿಮೆ ಹೊಂದಿರುವ ರಷ್ಯಾದ ಸ್ಪುಟ್ನಿಕ್‌-5 ಅನ್ನು ಕರ್ನಾಟಕದಲ್ಲಿ ಉತ್ಪಾದಿಸಲು ರಾಯಚೂರಿನ ಶಿಲ್ಪಾ ಮೆಡಿಕೇರ್‌ ಎಂಬ ಔಷಧ ಕಂಪನಿಯು ತನ್ನ ಅಂಗ ಸಂಸ್ಥೆಯಾದ ಶಿಲ್ಪಾ ಬಯೋಲಾಜಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಧಾರವಾಡ ಘಟಕದಲ್ಲಿ ಲಸಿಕೆ ಉತ್ಪಾದಿಸಲು ಡಾ. ರೆಡ್ಡೀಸ್‌ ಲ್ಯಾಬೋರೇಟರಿ ಜತೆ ಒಪ್ಪಂದ ಮಾಡಿಕೊಂಡಿದೆ. ಧಾರವಾಡದಲ್ಲಿರುವ ತನ್ನ ಘಟಕದಲ್ಲಿ ಸ್ಪುಟ್ನಿಕ್‌ ಲಸಿಕೆಯನ್ನು ಶಿಲ್ಪಾ ಬಯೋಲಾಜಿಕಲ್ಸ್‌ ವರ್ಷಕ್ಕೆ 5 ಕೋಟಿ ಲಸಿಕೆಯಂತೆ ಉತ್ಪಾದಿಸಲಿದೆ.

ವ್ಯಾಕ್ಸಿನ್ 2 ಡೋಸ್ ಹಾಕಿಸ್ಕೊಂಡಿದೀರಾ.? ಇಂಡಿಗೋ ಏರ್‌ಲೈನ್ಸ್‌ನಿಂದ ಗುಡ್‌ನ್ಯೂಸ್..!

Video Top Stories