Kolar: ಅನುದಾನ ವಿಚಾರ: ಕೈ ಕೈ ಮಿಲಾಯಿಸುವ ಹಂತ ತಲುಪಿದ ಮುನಿಸ್ವಾಮಿ, ನಂಜೇಗೌಡ
ಮಾಲೂರು ಪುರಸಭೆಯಲ್ಲಿ ಕರೆಯಲಾಗಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಜನತೆಯನ್ನು ಪ್ರತಿನಿಧಿಸಬೇಕಾದ ಶಾಸಕ ಹಾಗೂ ಸಂಸದರಿಬ್ಬರು ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಕ್ಷುಲಕ ಕಾರಣಕ್ಕಾಗಿ ನಡೆಸಿದ ವಾಗ್ವಾದ ಸಾರ್ವಜನಿಕ ಟೀಕೆಗೆ ಒಳಗಾಗಿದೆ.
ಕೋಲಾರ (ಫೆ. 16): ಮಾಲೂರು ಪುರಸಭೆಯಲ್ಲಿ ಕರೆಯಲಾಗಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಜನತೆಯನ್ನು ಪ್ರತಿನಿಧಿಸಬೇಕಾದ ಶಾಸಕ ಹಾಗೂ ಸಂಸದರಿಬ್ಬರು ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಕ್ಷುಲಕ ಕಾರಣಕ್ಕಾಗಿ ನಡೆಸಿದ ವಾಗ್ವಾದ ಸಾರ್ವಜನಿಕ ಟೀಕೆಗೆ ಒಳಗಾಗಿದೆ.
News Hour:ಎಕ್ಸಾಂ ಬಿಡ್ತೇವೆ, ಆದರೆ ಹಿಜಾಬ್ ತೆಗೆಯಲ್ಲ... ಹೈಕೋರ್ಟ್‌ನಲ್ಲಿ ಏನೇನಾಯ್ತು?
ಪುರಸಭೆ ಅಧ್ಯಕ್ಷೆ ಅನಿತಾ ನಾಗರಾಜು ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮುಖ್ಯಮಂತ್ರಿಯವರ ವಿಶೇಷ ಅನುದಾನದ 20 ಕೋಟಿ ಮಂಜೂರು ಮಾಡುವ ಪ್ರಸ್ತಾವನೆ ವಿಷಯದಲ್ಲಿ ಶಾಸಕ ನಂಜೇಗೌಡರು ಪುರಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾವೇ 8.5 ಕೋಟಿ ರು.ಗಳಿಗೆ ಕ್ರಿಯಾ ಯೋಜನೆಯ ಪಟ್ಟಿತಯಾರಿಸಿದ್ದನ್ನು ಸಂಸದ ಮುನಿಸ್ವಾಮಿ ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಶಾಸಕ ನಂಜೇಗೌಡ, ನಾನು ಈ ತಾಲೂಕಿನ ಶಾಸಕನಾಗಿ ಶಾಸನ ಬದ್ದವಾಗಿ ಇರುವ ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಯಾವುದಾದರೂ ಬದಲಾವಣೆ ಅವಶ್ಯ ಇದ್ದಲ್ಲಿ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ನನ್ನೊಡನೆ ಚರ್ಚಿಸಿ ಕಾಮಗಾರಿ ಪಟ್ಟಿಯನ್ನು ಬದಲಾಯಿಸಲಿ. ಇದೊಂದು ಸಣ್ಣ ವಿಷಯ. ಸಂಸದ ಮುನಿಸ್ವಾಮಿ ಅವರು ಕ್ಷೇತ್ರದ ಪ್ರತಿ ತಾಲೂಕಿನಲ್ಲೂ ಇದೇ ರೀತಿ ತೀಟೆ ಮಾಡುವುದನ್ನು ಬಿಡಬೇಕು ಎಂದರು.