Asianet Suvarna News Asianet Suvarna News

News Hour: ಎಕ್ಸಾಂ ಬಿಡ್ತೇವೆ, ಆದರೆ ಹಿಜಾಬ್ ತೆಗೆಯಲ್ಲ... ಹೈಕೋರ್ಟ್‌ನಲ್ಲಿ ಏನೇನಾಯ್ತು?

* ಏನಾದರೂ ಮಾಡಿ ಹಿಜಾಬ್ ತೆಗೆಯೊಲ್ಲ
*   ಹಿಜಾಬ್ ಪರ ದೇವದತ್ ಕಾಮತ್ ಮಂಡಿಸಿದ ವಾದವೇನು?
* ವಿಧಾನಸಭೆಯಲ್ಲಿಯೂ ಪ್ರಶ್ನೆ
* ನ್ಯಾಯಾಲಯದಲ್ಲಿ ಮುಂದುವರಿದ ವಿಚಾರಣೆ

ಬೆಂಗಳೂರು(ಫೆ. 15)  ಹಿಜಾಬ್ (Hijab)ಪ್ರಕರಣ ನ್ಯಾಯಾಲಯದಲ್ಲೇ(Karnataka High Court) ಇದೆ.  ಆದರೆ ವಿದ್ಯಾರ್ಥಿನಿಯರು (Students) ಮತ್ತು ಅತಿಥಿ ಉಪನ್ಯಾಸಕಿಯರು ಹಿಜಾಬ್ ತೆಗೆಯಲ್ಲ ಎಂದು ವಾದ ಮುಂದಿಟ್ಟಿದ್ದಕ್ಕೆ ಮಂಗಳವಾರ ನಡೆದ ಘಟನೆಗಳು ಸಾಕ್ಷಿಯಾದವು.

Hijab Row ಹಿಜಾಬ್ ಇಲ್ಲ, ಸಾಂಪ್ರದಾಯಿಕ ಡ್ರೆಸ್, ಪಾಕ್ ಸಂಸ್ಥಾಪಕ ಜಿನ್ನಾಜೊತೆ ಭಾರತ AIMSF ಚಿತ್ರ ಬಿಚ್ಚಿಟ್ಟ ರಹಸ್ಯ!

ಹಿಜಾಬ್ ಪರ ಕೋರ್ಟ್ ನಲ್ಲಿ ವಾದ ಮಾಡಿದ ದೇವದತ್ ಕಾಮತ್  ಸಂವಿಧಾನ (Constitution of India) ಬದ್ಧವಾಗಿರುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇನ್ನೊಂದು ಮಧ್ಯಂತರ ಆದೇಶ ಹೊರಡಿಸಿ ಹಿಜಾಬ್ ಗೆ ಅನುಮತಿ  ನೀಡಬೇಕು ಎಂದು ಕೇಳಿಕೊಂಡರು. ಹೆಣ್ಣು ಮಕ್ಕಳ ಶಿಕ್ಷಣದ ಕತೆ ಏನು ಎಂದು ಕಾಂಗ್ರೆಸ್ ನಾಯಕ ಯುಟಿ ಖಾದರ್ ಪ್ರಶ್ನೆ ಮಾಡಿದರು.