ಮೈಸೂರಲ್ಲಿ ಮಹಿಷ ದಸರಾಗೆ ಭರ್ಜರಿ ಸಿದ್ಧತೆ: ಚಾಮುಂಡಿ ಬೆಟ್ಟದಲ್ಲೇ ತಯಾರಿ !

ಚಾಮುಂಡಿ ಬೆಟ್ಟದಲ್ಲೇ ಮಹಿಷ ದಸರಾಗೆ ತಯಾರಿ 
ಬಿಜೆಪಿ ಇದ್ರೆ ಫುಲ್ಸ್ಟಾಪ್, ಕಾಂಗ್ರೆಸ್ ಬಂದಾಗ ಸ್ಟಾರ್ಟ್ 
ಮತ್ತೆ ಮುನ್ನೆಲೆಗೆ ಬಂದ ಮಹಿಷ ದಸರಾ ಆಚರಣೆ ವಿಚಾರ

Share this Video
  • FB
  • Linkdin
  • Whatsapp

ವಿಶ್ವ ವಿಖ್ಯಾತ ದಸರಾಗೆ ರಂಗು ಹೆಚ್ಚಿದೆ. ದಸರಾ ಆನೆಗಳು ಸಾಂಸ್ಕೃತಿಕ ನಗರಿಗೆ ಎಂಟ್ರಿ ಕೊಟ್ಟಿವೆ. ಸರ್ಕಾರವೂ ಭರ್ಜರಿ ತಯಾರಿಯಲ್ಲಿದೆ. ಇಷ್ಟೆಲ್ಲಾ ಅಬ್ಬರದ ನಡುವೆ ಮಹಿಷಾ ದಸರಾ(Mahisha Dasara) ಮುನ್ನಲೆಗೆ ಬಂದಿದೆ. ಚಾಮುಂಡಿ ಬೆಟ್ಟದಲ್ಲೇ ಮಹಿಷ ದಸರಾಗೆ ಭರ್ಜರಿ ಸಿದ್ದತೆ ನಡೆಸಲಾಗಿದೆ. ವಿಶ್ವ ವಿಖ್ಯಾತ ದಸರಾಗೂ ಒಂದು ತಿಂಗಳ ಮುಂಚೆಯೇ ಅದ್ದೂರಿಯಾಗಿ ನಡೆಸಲು ಮಹಿಷ ದಸರಾ ಆಚರಣಾ ಸಮಿತಿ ಮಹತ್ವದ ಸಭೆ ನಡೆಸಿದೆ. ಬಿಜೆಪಿ(BJP) ಅಧಿಕಾರಕ್ಕೆ ಬಂದಾಗ ಮಹಿಷ ದಸರಾಕ್ಕೆ ಬ್ರೇಕ್ ಹಾಕಲಾಗಿತ್ತು. ಈಗ ಕಾಂಗ್ರೆಸ್(Congress) ಆಡಳಿತಕ್ಕೆ ಬರುತ್ತಲೇ ಮಹಿಷ ದಸರಾಗೆ ಸಮಿತಿ ಸಿದ್ಧತೆ ಆರಂಭಿಸಿದೆ. ಅಕ್ಟೋಬರ್‌ನಲ್ಲಿ ಸಾಂಪ್ರದಾಯಿಕ ಮೈಸೂರು ದಸರಾ ನಡೆಯುತ್ತಿದೆ. ಅದಕ್ಕೂ ಮುನ್ನವೇ ಸೆಪ್ಟಂಬರ್‌ನಲ್ಲೇ ಚಾಮುಂಡಿ ಬೆಟ್ಟದಲ್ಲೇ(Chamundi hill) ಮಹಿಷ ದಸರಾ ನಡೆಸಲು ಸಿದ್ಧತೆ ನಡೆಸಲಾಗ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ಥಳ ಹಾಗೂ ದಿನಾಂಕ ನಿಗದಿ ಫೈನಲ್ ಮಾಡಲಾಗುತ್ತದೆ. ಇನ್ನು ಪ್ರೊ. ಮಹೇಶ್ ಚಂದ್ರಗುರು, ಕೆ.ಎಸ್ ಭಗವಾನ್ ನೇತೃತ್ವದಲ್ಲಿ ಮಹಿಷನ ಬಗ್ಗೆ ದೇಶದ ಉದ್ದಗಲಕ್ಕೂ ಮಾಹಿತಿ ಕಲೆ ಹಾಕಲು ಚಿಂತನೆ ನಡೆದಿದೆ. ಮಹಿಷ ಪ್ರಾಧಿಕಾರ ರಚನೆ ಹಾಗೂ ಮಹಿಷ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯಿಸಲು ಮುಂದಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಹೆಜ್ಜೆ ಹೆಜ್ಜೆಗೂ ಬಿಬಿಎಂಪಿ ಗುತ್ತಿಗೆದಾರರು ಯೂಟರ್ನ್: ಕಮಿಷನ್ ದಂಗಲ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ !

Related Video