Asianet Suvarna News Asianet Suvarna News

ಸ್ಫೋಟಕ ಆಡಿಯೋ ಬಗ್ಗೆ ನಳೀನ್ ಕುಮಾರ್ ಕಟೀಲ್ ಮೊದಲ ಪ್ರತಿಕ್ರಿಯೆ!

'ವೈರಲ್ ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ, ಅದು ತಿರುಚಿದ ಆಡಿಯೋ, ಯಾರೋ ಕಿಡಿಗೇಡಿಗಳು ಈ ಆಡಿಯೋ ಹರಿಯಬಿಟ್ಟಿದ್ದಾರೆ.  ಈ ಬಗ್ಗೆ ತನಿಖೆ ನಡೆಯಲಿ, ಸಿಎಂ ಬಳಿಯೂ ಮಾತನಾಡುವೆ' ಎಂದು ಕಟೀಲ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹೇಳಿದ್ಧಾರೆ. 

ಬೆಂಗಳೂರು (ಜು. 19): ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿರುವ ಆಡಿಯೋ ಬಗ್ಗೆ ನಳಿನ್ ಕುಮಾರ್ ಕಟೀಲ್ ಮೊದಲ ಪ್ರತಿಕ್ರಿಯೆ ಇದು. 

'ವೈರಲ್ ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ, ಅದು ತಿರುಚಿದ ಆಡಿಯೋ, ಯಾರೋ ಕಿಡಿಗೇಡಿಗಳು ಈ ಆಡಿಯೋ ಹರಿಯಬಿಟ್ಟಿದ್ದಾರೆ.  ಈ ಬಗ್ಗೆ ತನಿಖೆ ನಡೆಯಲಿ, ಸಿಎಂ ಬಳಿಯೂ ಮಾತನಾಡುವೆ' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹೇಳಿದ್ಧಾರೆ. ಇನ್ನು ನಮ್ಮಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆಯಾಗಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.