
ಜಕ್ಕೂರು ಫ್ಲೈಯಿಂಗ್ ಶಾಲೆಗಾಗಿ ಮೈಸೂರು ಮಹರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ?
ಜಕ್ಕೂರು ಪ್ಲೈಯಿಂಗ್ ಶಾಲೆಗಾಗಿ ಮೈಸೂರು ಮಹರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ ನೀಡಲು ಕ್ರೀಡಾ ಇಲಾಖೆ ಸಜ್ಜು..!? 1500 ಕೋಟಿ ಮೌಲ್ಯದ 75 ಎಕರೆ ಜಾಗವನ್ನು ಖಾಸಗಿಯವರಿಗೆ ನೀಡುವ ಹುನ್ನಾರದ ಬಗ್ಗೆ ಆರೋಪ..! ಈ ವಿಚಾರದಲ್ಲಿ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯಿಂದ ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೆ ದೂರು.!
ಬೆಂಗಳೂರು (ಸೆ. 17): ಮೈಸೂರಿನ ಮಹಾರಾಜರು ಜಕ್ಕೂರಿನಲ್ಲಿ ಫ್ಲೈಯಿಂಗ್ ಶಾಲೆ ನಿರ್ಮಾಣ ಮಾಡುವ ಕುರಿತಾಗಿ ನೀಡಿದ್ದ ಜಾಗವನ್ನು ಖಾಸಗಿಯವರಿಗೆ ಕ್ರೀಡಾ ಇಲಾಖೆ ನೀಡಲು ಸಜ್ಜಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. 1500 ಕೋಟಿ ರೂಪಾಯಿ ಮೌಲ್ಯದ 75 ಎಕರೆ ಜಾಗ ಇದಾಗಿದ್ದು, ಈ ಕುರಿತಾಗಿ ಅಮೂಲಾಗ್ರ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ, ರಾಜ್ಯಪಾವ ಥಾವರ್ ಚಂದ್ ಗೆಹ್ಲೋಟ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದೆ.
ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ, ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದೆ ಸಂಪೂರ್ಣವಾಗಿ ತೆರೆದಿಡಲಾಗುವುದು. ಅವರ ಅಭಿಪ್ರಾಯ ಸಿಕ್ಕ ಬಳಿಕ ಮುಂದುವರಿಯಲಾಗುವುದು ಎಂದು ತಿಳಿಸಿದ್ದಾರೆ.
ಜಕ್ಕೂರು ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ
ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅಲ್ಲಿ ಜಾಗ ಮೀಸಲಿಡಲಾಗಿದೆ ಎನ್ನುವುದು ಸುಳ್ಳು ಸುದ್ದಿ . ಮೈಸೂರಿನ ಮಹಾರಾಜರು ನೀಡಿದ್ದ ಜಾಗವನ್ನು ಒಂದಿಂಚು ಕೂಡ ಬೇರೆಯವರಿಗೆ ನೀಡುವುದಿಲ್ಲ ಎಂದು ಈ ವೇಳೆ ಹೇಳಿದ್ದಾರೆ.