Asianet Suvarna News Asianet Suvarna News

ಗೃಹಲಕ್ಷ್ಮಿ ಯೋಜನೆ ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡಲು ಚಿಂತನೆ : ಲಕ್ಷ್ಮಿ ಹೆಬ್ಬಾಳ್ಕರ್‌

ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತೇವೆ. ವಿಳಂಬ ಮಾಡದೇ, ಯೋಜನೆ ಜಾರಿಗೆ ತಂದೇ ತರುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಿರುವುದು ಯಾಕೆ ಎಂಬುದರ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ. ಇದೆ ವೇಳೆ ಮಹಿಳಾ ಸಬಲೀಕರಣದ ಬಗ್ಗೆ ಸಹ ಮಾತನಾಡಿದರು. ಇನ್ನೂ ಗೃಹಲಕ್ಷ್ಮಿ ಯೋಜನೆ(Grilahakshmi Yojana) ಬಗ್ಗೆ ಮಾತನಾಡಿದ ಅವರು, ನಾವು 2 ಸಾವಿರ ರೂಪಾಯಿಯನ್ನು ಒಂದು ಕೋಟಿ 28 ಲಕ್ಷ ಕುಟುಂಬಳಿಗೆ ಕೊಡುತ್ತಿದ್ದೇವೆ. ಇದರಲ್ಲಿ 15 ಲಕ್ಷ ಕುಟುಂಬಗಳಿಗೆ ಇದರಿಂದ ತುಂಬಾ ತೊಂದರೆಯಾಗಿರಬಹುದು. ಮಧ್ಯಮ ವರ್ಗದವರಿಗೆ ಈ ಯೋಜನೆ ಲಾಭ ಯಾವ ರೀತಿ ಮಾಡಬಹುದು ಎಂದು ಚಿಂತನೆ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದರು.

ಇದನ್ನೂ ವೀಕ್ಷಿಸಿ:  ನನಗೂ ಫ್ರೀ..ನಿನಗೂ ಫ್ರೀ..ಈಡೇರಿತು ಸಿದ್ದು ಶಪಥ: ಇನ್ಮುಂದೆ ಎಲ್ಲರಿಗೂ ಕರೆಂಟ್ ಉಚಿತ..!

Video Top Stories