ನನಗೂ ಫ್ರೀ..ನಿನಗೂ ಫ್ರೀ..ಈಡೇರಿತು ಸಿದ್ದು ಶಪಥ: ಇನ್ಮುಂದೆ ಎಲ್ಲರಿಗೂ ಕರೆಂಟ್ ಉಚಿತ..!

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್..!
ಮನೆ ಮನೆಗೆ ಬರಲಿದೆ "ಝೀರೋ" ಕರೆಂಟ್ ಬಿಲ್..!
ಆಗಸ್ಟ್ 5ಕ್ಕೆ ಖರ್ಗೆ ನೆಲದಲ್ಲಿ ಗೃಹಜ್ಯೋತಿಗೆ ಚಾಲನೆ..!

Share this Video
  • FB
  • Linkdin
  • Whatsapp

 ಶಪಥ ಮಾಡಿದ್ದ ಸಿಎಂ ಸಿದ್ದರಾಮಯ್ಯ(CM Siddaramaiah), ತಮ್ಮ 3ನೇ ಗ್ಯಾರಂಟಿ ಶಪಥವನ್ನು ಈಡೇರಿಸಿದ್ದಾರೆ. ಯಾರೆಲ್ಲಾ ಗೃಹಜ್ಯೋತಿ ಯೋಜನೆಗೆ(Grihajyoti Yojana) ಅಪ್ಲೈ ಮಾಡಿದ್ದಾರೋ, ಆ ಅಪ್ಲಿಕೇಷನ್‌ಗಳಲ್ಲಿ ಯಾವೆಲ್ಲಾ ಅರ್ಜಿಗಳು ಸ್ವೀಕೃತವಾಗಿವೆಯೋ. ಅವ್ರಿಗೆಲ್ಲಾ ಈ ತಿಂಗಳಿಂದ ಬಂಪರ್ ಗಿಫ್ಟ್. ಯಾಕಂದ್ರೆ ಇನ್ನು ಮುಂದೆ ಕರೆಂಟ್ ಬಿಲ್(Current bill) ಕಟ್ಟಬೇಕಿಲ್ಲ. ಆಗಸ್ಟ್ ತಿಂಗಳಿಂದ ನಿಮ್ಮ ಮನೆಗೆ ಝೀರೋ ಬಿಲ್ ಬರಲಿದೆ. ಇದು ಕಾಂಗ್ರೆಸ್ ಘೋಷಿಸಿದ್ದ ಮೊದಲ ಗ್ಯಾರಂಟಿ, ಅದೇ ಗೃಹಜ್ಯೋತಿ ಗ್ಯಾರಂಟಿ. ತಿಂಗಳಿಗೆ 200 ಯೂನಿಟ್ ಕರೆಂಟ್ ಫ್ರೀ... ನನಗೂ ಫ್ರೀ, ನಿಮಗೂ ಫ್ರೀ.. ಮಹಾದೇವಪ್ಪನಿಗೂ ಫ್ರೀ, ಏಯ್.. ಕಾಕಾ ಪಾಟೀಲ್.. ನಿನಗೂ ಫ್ರೀ.. ಸಿದ್ದರಾಮಯ್ಯನವರು ಅವತ್ತು ಆಡಿದ್ದ ಇದೇ ಮಾತನ್ನ ಈಗ ಉಳಿಸಿಕೊಳ್ಳೋ ಸಮಯ ಬಂದೇ ಬಿಟ್ಟಿದೆ. ಹಾಗ್ ನೋಡಿದ್ರೆ.. ಪಂಚಗ್ಯಾರಂಟಿಗಳ ಪೈಕಿ ಮೊಟ್ಟ ಮೊದಲ ಗ್ಯಾರಂಟಿ "ಗೃಹಜ್ಯೋತಿ" ಯೋಜನೆ ಜುಲೈ ಒಂದರಿಂದಲೇ ಜಾರಿಯಾಗಿತ್ತು. ಅದ್ರ ಫಲ ಈ ತಿಂಗಳಿಂದ ಸಿಗ್ತಾ ಇದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಮೊದಲ ಗ್ಯಾರಂಟಿಯನ್ನು ಸರ್ಕಾರ ಜಾರಿಗೆ ತಂದಿದೆ. ಜುಲೈ ಉರುಳಿ ಆಗಸ್ಟ್ ತಿಂಗಳು ಶುರುವಾಗ್ತಿದ್ದಂತೆ ಮನೆ ಮನೆಗೆ ಝೀರೋ ಕರೆಂಟ್ ಬಿಲ್ ಬರ್ತಾ ಇದೆ. ರಾಜ್ಯದ ಹಲವೆಡೆ ಮಂಗಳವಾರ ಬೆಳಗ್ಗೆಯಿಂದಲೇ ಶೂನ್ಯ ಬಿಲ್ ವಿತರಣೆ ಆರಂಭವಾಗಿದ್ದು, ಇಂಧನ ಇಲಾಖೆಯ ಸಿಬ್ಬಂದಿ ಮನೆ ಮನೆ ತೆರಳಿ ಬಿಲ್ ನೀಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್: ಹಿಂದೂಗಳಿಗೆ ಮುಸ್ಲಿಂ ಹುಡುಗಿಯ ಹೆಸರು..!

Related Video