Asianet Suvarna News Asianet Suvarna News

ತಮಿಳುನಾಡು ಸಿಎಂ ಸ್ನೇಹ, ಪ್ರೀತಿಗಾಗಿ ಕರ್ನಾಟಕ ಜನರನ್ನು ಬಲಿಕೊಡಬೇಡಿ: ಕುರುಬೂರು ಶಾಂತಕುಮಾರ್‌

ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುತ್ತಿರುವುದನ್ನು ಖಂಡಿಸಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಈ ಬಗ್ಗೆ ರೈತರ ಮುಖಂಡ ಕುರುಬೂರು ಶಾಂತಕುಮಾರ್‌ ಮಾತನಾಡಿದ್ದಾರೆ.
 

First Published Sep 26, 2023, 11:43 AM IST | Last Updated Sep 26, 2023, 11:43 AM IST

ಬೆಂಗಳೂರು: ನಾವು ಗಲಾಟೆ ಮಾಡಲ್ಲ ಶಾಂತಿ ರೀತಿಯಲ್ಲಿ ಪ್ರತಿಭಟನೆ (Protest) ಮಾಡುತ್ತೇವೆ. ಸಾಮಾಜಘಾತುಕ ಶಕ್ತಿಗಳು ದುಷ್ಕೃತ್ಯ ಮಾಡಿದ್ರೆ ಅವರನ್ನು ಬಂಧಿಸಿ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್(Kuruburu Shanthakumar) ಹೇಳಿದ್ದಾರೆ. ನಾವು ರೈತರ ಋಣ ತೀರಿಸೋಕೆ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಪಕ್ಷಗಳು ನಮಗೆ ಸಹಕಾರ ಕೊಟ್ಟಿವೆ. ನಾವು ಸರ್ಕಾರಕ್ಕೆ ಪಾಠ ಕಲಿಸೇ ಕಲಿಸುತ್ತೇವೆ. ಕರ್ನಾಟಕದ ರೈತರು ಬೀದಿಗಿಳಿದ್ರೆ, ಎಲ್ಲಾವನ್ನು ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ. ತಮಿಳುನಾಡು(Tamilnadu) ಸಿಎಂ ಸ್ನೇಹ, ಪ್ರೀತಿಗಾಗಿ ಕರ್ನಾಟಕ ಜನರನ್ನು ಬಲಿಕೊಡಬೇಡಿ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶವನ್ನು ವ್ಯಕ್ತಪಡಿಸಿದರು. ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ. ಈ ಸರ್ಕಾರ ರಾತ್ರೋ ರಾತ್ರಿ ಕದ್ದುಮುಚ್ಚಿ ನೀರನ್ನು ಬಿಡುತ್ತಿದೆ. ಇದು ತಮಿಳುನಾಡು ಸರ್ಕಾರದ ಏಜೆಂಟ್‌ ಸರ್ಕಾರ ಇದಾಗಿದೆ ಎಂದು ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರೈತರೊಂದಿಗೆ ರಸ್ತೆಯಲ್ಲೇ ತಿಂಡಿ ಮಾಡಿ ವಿನೂತನ ಪ್ರತಿಭಟನೆ ಮಾಡಿದರು.

ಇದನ್ನೂ ವೀಕ್ಷಿಸಿ:  ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಹೋರಾಟ: ಇಂದು ಮಳವಳ್ಳಿ ಪಟ್ಟಣ ಬಂದ್‌ಗೆ ಅನ್ನದಾನಿ ಕರೆ