
PSI ಹಗರಣದಲ್ಲಿ ಶಾಸಕ- ಸಚಿವರು? ಡಿಕೆ ಶಿವಕುಮಾರ್ ಹೊಸ ಬಾಂಬ್, ಗಂಭೀರ ಆರೋಪ
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಡಿಕೆ ಶಿವಕುಮಾರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಅಕ್ರಮದ ಹಿಂದೆ ಯಾರಿದ್ದಾರೆ ಎನ್ನುವ ಪಟ್ಟಿ ನನಗೆ ಸಿಗ್ತಿದೆ. ಹಗರಣದಲ್ಲಿ ಭಾಗಿಯಾಗಿರುವ ಕೆಲ ಸಚಿವರು ಹಾಗೂ ಶಾಸಕರ ಹೆಸರು ಬರ್ತಿಲ್ಲ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ (PSI Recruitment Scam) ಡಿಕೆ ಶಿವಕುಮಾರ್ (DK Shivakumar) ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಅಕ್ರಮದ ಹಿಂದೆ ಯಾರಿದ್ದಾರೆ ಎನ್ನುವ ಪಟ್ಟಿ ನನಗೆ ಸಿಗ್ತಿದೆ. ಹಗರಣದಲ್ಲಿ ಭಾಗಿಯಾಗಿರುವ ಕೆಲ ಸಚಿವರು ಹಾಗೂ ಶಾಸಕರ ಹೆಸರು ಬರ್ತಿಲ್ಲ. ಕಾಂಗ್ರೆಸ್ (Congress) ಆಗಲಿ, ಯಾರೇ ಇರಲಿ, ಮೊದಲು ತನಿಖೆಗೆ ಆದೇಶಿಸಲಿ. ಇಡೀ ಹಗರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಲಾಗಿದೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
'ಸರ್ಕಾರ ಬಿದ್ದು ಹೋದರೂ ಪರ್ವಾಗಿಲ್ಲ, ಕಿಂಗ್‌ಪಿನ್‌ಗಳನ್ನ ಮಟ್ಟ ಹಾಕ್ತೀವಿ': ಗೃಹ ಸಚಿವ
ಇನ್ನು ಸಚಿವ ಅಶ್ವತ್ಥ ನಾರಾಯಣ (Dr CN Ashwath Narayan) ವಿರುದ್ಧವು ಡಿಕೆ ಶಿವಕುಮಾರ್ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಮೊದಲು ಎಲ್ಲ ಅಭ್ಯರ್ಥಿಗಳಿಗೂ ನೋಟಿಸ್ ಕೊಟ್ಟು ಕರೆಸಿದ್ದಾರೆ. ಗೃಹ ಸಚಿವ ಮತ್ತು ಅಶ್ವತ್ಥ ನಾರಾಯಣ ಪೋನ್ ಮಾಡಿದ್ದಾರೆ. ಸಿಐಡಿಯವರು (CID) ಅಶ್ವತ್ಥನಾರಾಯಣ ಫೋನ್ ಕಾಲ್ ಬಳಿಕ ಅವರ ಕಡೆಯವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.