'ಸರ್ಕಾರ ಬಿದ್ದು ಹೋದರೂ ಪರ್ವಾಗಿಲ್ಲ, ಕಿಂಗ್‌ಪಿನ್‌ಗಳನ್ನ ಮಟ್ಟ ಹಾಕ್ತೀವಿ': ಗೃಹ ಸಚಿವ

'ನಮ್ಮ ಸರ್ಕಾರ ಬಿದ್ದು ಹೋದರೂ ಪರ್ವಾಗಿಲ್ಲ, ಅಕ್ರಮದ ಕಿಂಗ್‌ಪಿನ್‌ಗಳನ್ನು (Kingpin)  ಮಾತ್ರ ಬಿಡಲ್ಲ. ಕುಮಾರಸ್ವಾಮಿ (HD Kumaraswamy) ಬಳಿ ದಾಖಲೆಗಳಿದ್ರೆ ಕೊಡಲಿ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra)ಗುಡುಗಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 07): 'ನಮ್ಮ ಸರ್ಕಾರ ಬಿದ್ದು ಹೋದರೂ ಪರ್ವಾಗಿಲ್ಲ, ಅಕ್ರಮದ ಕಿಂಗ್‌ಪಿನ್‌ಗಳನ್ನು (Kingpin) ಮಾತ್ರ ಬಿಡಲ್ಲ. ಕುಮಾರಸ್ವಾಮಿ (HD Kumaraswamy) ಬಳಿ ದಾಖಲೆಗಳಿದ್ರೆ ಕೊಡಲಿ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra)ಗುಡುಗಿದ್ದಾರೆ. 

News Hour ರಾಜ್ಯದ ಇತರ ಜಿಲ್ಲೆಗಳಲ್ಲೂ ಅಕ್ರಮದ ಜಾಡು! ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ಯಾರು?

'ಶಿಸ್ತಿಗೆ ಕರ್ನಾಟಕ ಪೊಲೀಸ್‌ (Karnataka Police)ಸದಾ ಹೆಸರುವಾಸಿ. ಆದರೆ ಪಿಎಸ್‌ಐ ಪರೀಕ್ಷೆಯಲ್ಲಿ ಧನದಾಹಿ ಕೆಲವು ಪೊಲೀಸರು ಮಾಡಿದ ಹೇಸಿಗೆ ಕೆಲಸಕ್ಕೆ ಗೌರವ, ಮರ್ಯಾದೆ ಮಣ್ಣುಪಾಲಾಗಿದೆ. ಪರೀಕ್ಷೆ ಬರೆದ ಜಾಣರು ಮಣ್ಣು ಮುಕ್ಕುವಂತಾಗಿದೆ. ಸರ್ಕಾರಿ ನೌಕರಿ ದುಡ್ಡು ಕೊಟ್ಟು ಖರೀದಿಸಲು ಹೊರಟವರಿಗೆ ಸರಿಯಾಗಿ ಪಾಠ ಕಲಿಸುತ್ತೇವೆ' ಎಂದು ಆರಗ ಎಚ್ಚರಿಕೆ ನೀಡಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ (PSI Recruitment Scam) ಅಕ್ರಮ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕು. ಸಚಿವ ಅಶ್ವತ್ಥ ನಾರಾಯಣ ಅವರ ಇಬ್ಬರು ಸಂಬಂಧಿಕರು ನೇಮಕಗೊಂಡಿದ್ದಾರೆ. ಹೀಗಾಗಿ ಅವರು ಇದರಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ನಡೆದರೆ ಎಲ್ಲವೂ ಬಯಲಿಗೆ ಬರಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

Related Video