News Hour: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಆಪರೇಷನ್‌ ಹುಲಿ ಉಗುರು!

ರಾಜ್ಯದಲ್ಲಿ ಹುಲಿ ಉಗುರು ಸಂಚಲನ ಸೃಷ್ಟಿಸಿದೆ. ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರನ್ನು ಬಂಧಿಸಿದ ಬೆನ್ನಲ್ಲಿಯೇ, ಅದೇ ರೀತಿಯ ಹುಲಿ ಉಗುರು ಪೆಂಡೆಂಟ್‌ಗಳನ್ನು ಹೊಂದಿರುವ ಸ್ಯಾಂಡಲ್‌ವುಡ್‌ ನಟರನ್ನೂ ಬಂಧಿಸುವಂತೆ ಆಗ್ರಹ ಜೋರಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಅ.25): ಹುಲಿ ಉಗುರು ಹೊಂದಿದ್ದ ಪೆಂಡೆಂಟ್‌ ಧರಿಸಿದ್ದ ಕಾರಣಕ್ಕೆ 'ಹಳ್ಳಿಕಾರ್‌ ಒಡೆಯ' ಹಾಗೂ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಹುಲಿ ಉಗುರು ಲಾಕೆಟ್ ಧರಿಸಿ ‘ಹಳ್ಳಿಕಾರ್ ಒಡೆಯ’ ತಗ್ಲಾಕಿಕೊಂಡಿದ್ದೇ, ಅದೇ ರೀತಿಯ ಪೆಂಡೆಂಟ್‌ ಧರಿಸಿರುವ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಬಂಧನಕ್ಕೆ ಆಗ್ರಹ ಜೋರಾಗಿದೆ.

ಅ.23ಕ್ಕೆ ಬಿಗ್‌ಬಾಸ್‌ ಸ್ಪರ್ಧಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು. ವೈಲ್ಡ್‌ ಲೈಫ್‌ ಪ್ರೊಟೆಕ್ಷನ್ ಕಾಯ್ದೆಯಡಿ ಸಂತೋಷ್ ಬಂಧನವಾಗಿತ್ತು. ಪ್ರಸ್ತುತ 2ನೇ ಎಸಿಜೆಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಅವರೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಖಿಲ್‌ಗೆ ಗಿಫ್ಟ್ ಬಂದಿರೋದು ಎಂದು ಅರಣ್ಯಾಧಿಕಾರಿಗಳಿಗೆ ಹುಲಿ ಉಗುರಿನ ಪೆಂಡೆಂಟ್ ಒಪ್ಪಿಸಿದ ಎಚ್‌ಡಿಕೆ!

ಈ ನಡುವೆ ವರ್ತೂರು ಸಂತೋಷ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಹುಲಿ ಉಗುರು ಪೆಂಡೆಂಟ್‌ ಧರಿಸಿದ್ದ ನಟ ದರ್ಶನ್‌, ಜಗ್ಗೇಶ್‌, ನಿಖಿಲ್‌ ಕುಮಾರಸ್ವಾಮಿ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ವಿನಯ್‌ ಗುರೂಜಿ. ಧನಂಜಯ ಗುರೂಜಿ ಅವರನ್ನು ಬಂಧಿಸಿ ಎನ್ನುವ ಆಗ್ರಹ ವ್ಯಕ್ತವಾಗಿದೆ.

Related Video