Karnataka rain: ನದಿಯಲ್ಲಿ ಕೊಚ್ಚಿ ಹೋಗುತಿದ್ದ ತಂದೆ ಮಗನನ್ನು ಸಿನೀಮಿಯ ರೀತಿಯಲ್ಲಿ ರಕ್ಷಣೆ.?
ಕುಶಾವತಿ ನದಿಯಲ್ಲಿ ಕೊಚ್ಚಿಹೋಗುತಿದ್ದ ತಂದೆ ಮಗನನನ್ನು ಸಿನೀಮಿಯ ರೀತಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ರಕ್ಷಿಸಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು (ನ. 23): ಕುಶಾವತಿ ನದಿಯಲ್ಲಿ ಕೊಚ್ಚಿಹೋಗುತಿದ್ದ ತಂದೆ ಮಗನನನ್ನು ಸಿನೀಮಿಯ ರೀತಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ರಕ್ಷಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಗ್ರಾಮದಲ್ಲಿ ನಡೆದಿದೆ.
Karnataka Rain: ರಣಭೀಕರ ಮಳೆಗೆ ರಾಜ್ಯದಲ್ಲಿ 24 ಸಾವು, 9153 ಮನೆ ಹಾನಿ, ರೈತರ ಗೋಳು ಕೇಳೋರು ಯಾರು?
ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ತೆರಳುತಿದ್ದ ತಂದೆ ಮಗ ಬಾಗೇಪಲ್ಲಿಯ ಚಾಕವೇಲು ಗ್ರಾಮದ ನದಿಯಲ್ಲಿ ದ್ವಿಚಕ್ರ ವಾಹನ ಸಮೇತ ಕೊಚ್ಚಿಹೋಗುತಿದ್ದಾಗ ಹೊಸಹುಡ್ಯ ಗ್ರಾಮದ ಯುವಕ ಮಾರುತಿ ಸಾಹಸ ಮಾಡಿ ರಕ್ಷಣೆ ಮಾಡಿದ್ದಾನೆ. ಕುಶಾವತಿ ನದಿ ಆಳವನ್ನು ಅರಿಯದೆ ನೀರಿಗೆ ಬೈಕ್ ಇಳಿಸಿದ ಪರಿಣಾಮ ತಂದೆ, ಮಗ ನದಿ ನೀರಿನಲ್ಲಿ ಕೋಚ್ಚಿ ಹೋಗುತ್ತಿದ್ದಾಗ ಸ್ಥಳೀಯ ಕೂಡಕೇ ಕಾರ್ಯಾಚರಣೆ ತಂದೆ, ಮಗನಿಗೆ ಮರು ಜೀವ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಈವರೆಗೆ 24 ಮಂದಿ ಜೀವ ಕಳೆದುಕೊಂಡಿದ್ದಾರೆ. 9153 ಮನೆ, 5 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 1,225 ಶಾಲೆ, 39 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಹಲವು ಹಾನಿ ವರದಿಯಾಗಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.