40% ಕಮಿಷನ್‌ ಆರೋಪಕ್ಕೆ ತಿರುಗೇಟು ನೀಡಲು ಬಿಜೆಪಿ ಪ್ಲಾನ್

ಬಿಜೆಪಿ ಸರ್ಕಾರದ ವಿರುದ್ಧ ನಲವತ್ತು ಪರ್ಸೆಂಟ್ ಕಮೀಷನ್ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ ಭರ್ಜರಿ ಪ್ಲ್ಯಾನ್ ಸಿದ್ಧ ಮಾಡಿದೆ. ಕಾಂಗ್ರೆಸ್ ಅವಧಿಯಲ್ಲಿ ಆದ ಎಲ್ಲಾ ಕ್ರಮಗಳ ದಾಖಲೆಯನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.
 

First Published Apr 16, 2022, 12:26 PM IST | Last Updated Apr 16, 2022, 12:26 PM IST

ವಿಜಯನಗರ (ಏ.16): ಸರ್ಕಾರದ ಮೇಲೆ ಹೊರಿಸಿರುವ ನಲವತ್ತು ಪರ್ಸೆಂಟ್ ಕಮೀಷನ್ ಆರೋಪಕ್ಕೆ ಸಿಟ್ಟಾಗಿರುವ ಬಿಜೆಪಿ (BJP), ಆಕ್ರಮಣಕಾರಿ ಧೋರಣೆಯೊಂದಿಗೆ ಇದನ್ನು ವಿರೋಧಿಸಲು ಮುಂದಾಗಿದೆ. ಕಾಂಗ್ರೆಸ್ (Congress) ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ (Corruption) ದಾಖಲೆಯನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲಾ ಅಕ್ರಮಗಳ ದಾಖಲೆಯನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರ ಮೇಲೆ ಗಂಭೀರ ಆರೋಪ ಹೊರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ದಾಖಲೆ ಸಹಿತ ಜನರ ಬಳಿ ತೆರಳುವುದಾಗಿ ಕೇಸರಿ ಪಡೆ ತೊಡೆ ತಟ್ಟಿದೆ.

ಈಶ್ವರಪ್ಪ ಬಂಧನ ಆಗ್ರಹಿಸಿ ಕಾಂಗ್ರೆಸ್‌ ರಾಜ್ಯವ್ಯಾಪಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಡಿಕೆಶಿ ನೇತೃತ್ವ!

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಪಟ್ಟು ಹಿಡಿದಿರುವ ಕಾಂಗ್ರೆಸ್, ಈಶ್ವರಪ್ಪ ರಾಜೀನಾಮೆಯಲ್ಲ ಅವಧ ಬಂಧನವಾಗಬೇಕು ಎಂದು ಹೇಳಿದೆ. ಇದರ ನಡುವೆ ಬಿಜೆಪಿ, ಕಾಂಗ್ರೆಸ್ ನ ತಂತ್ರಗಳಿಗೆ ಅವರ ಅಕ್ರಮದ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡುವ ಸಿದ್ಧತೆಯಲ್ಲಿದೆ.

Video Top Stories