Mohammed Nalapad : ಯುವ ಕಾಂಗ್ರೆಸ್ ನಾಯಕನ ಮೇಲೆ ನಲಪಾಡ್ ಹಲ್ಲೆ!
ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಮೇಲೆ ಹಲ್ಲೆ
ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್
ಯುವ ಕಾಂಗ್ರೆಸ್ ಸಭೆಯ ವೇಳೆ ನಡೆದ ಘಟನೆ
ಬೆಂಗಳೂರು (ಜ.20): ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ (NA Haris) ಪುತ್ರ ಮೊಹಮದ್ ನಲಪಾಡ್ (Mohammed Nalapad) ವಿರುದ್ಧ ಮತ್ತೊಮ್ಮೆ ಹಲ್ಲೆ ಆರೋಪ ಕೇಳಿ ಬಂದಿದೆ. ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳೇಗೌಡ ಮೇಲೆ ನಲಪಾಡ್ ಹಾಗೂ ಆತನ ಬೆಂಬಲಿಗರು ಖಾಸಗಿ ಹೋಟೆಲ್ ನಲ್ಲಿ ಬುಧವಾರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
'ನಲಪಾಡ್ ಹಲ್ಲೆ ಘಟನೆ ಕ್ಷುಲ್ಲಕ ಅಲ್ಲ: 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್’ ಹಾಕಿದ್ದರು'
ಯಲಹಂಕದ ರೆಸಾರ್ಟ್ ನಲ್ಲಿ ಮೊಹಮದ್ ನಲಪಾಡ್ ಅವರ ಪದಗ್ರಹಣದ ಕುರಿತಾಗಿ ಚರ್ಚೆ ನಡೆಸಲಾಗಿತ್ತು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮಂಜುನಾಥ್ ಗೌಡ ಅವರ ಬೆಂಬಲಿಗರಾಗಿದ್ದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳೇಗೌಡ ಅವರ ಬೆಂಬಲಿಗರು ಹಾಗೂ ನಲಪಾಡ್ ಅವರ ನಡುವೆ ಗಲಾಟೆಯಾಗಿದೆ. "ಏನೋ ನೀನು ಮಂಜು ಗೌಡಗೆ ಬೆಂಬಲ ನೀಡ್ತೀರಾ" ಎಂದು ಹೇಳಿ ಸಿದ್ಧು ಹಳೇಗೌಡನ ಮೇಲೆ ಹಲ್ಲೆ ನಡೆಸಿದ್ದಾರೆ. ಸಿದ್ಧು ಅವರ ಸಹೋದರರಾದ ಪೃಥ್ವಿ ಹಾಗೂ ಕಿರಣ್ ಅವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾಗಿ ದೂರು ನೀಡಲು ಮುಂದಾಗಿದ್ದ ಸಿದ್ಧು ಹಳೇಗೌಡ ಅವರ ಮನವೊಲಿಸಲು ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.