ಹಾನಗಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಕಸರತ್ತು, ರೇವತಿ ಶಿವಕುಮಾರ್‌ಗೆ ಟಿಕೆಟ್ ಇಲ್ಲ.?

ಅ.30ರಂದು ಉಪಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಭರ್ಜರಿ ಲಾಬಿ ನಡೆದಿದೆ. ಪಕ್ಷದ ಪ್ರಮುಖ ಮುಖಂಡರ ಮೂಲಕ ಒತ್ತಡ ಹೇರುವ ಪ್ರಯತ್ನಗಳು ಸಹ ನಡೆದಿವೆ.
 

First Published Oct 1, 2021, 10:45 AM IST | Last Updated Oct 1, 2021, 10:45 AM IST

ಬೆಂಗಳೂರು (ಅ. 01): ಅ.30 ರಂದು ಉಪಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಭರ್ಜರಿ ಲಾಬಿ ನಡೆದಿದೆ. ಪಕ್ಷದ ಪ್ರಮುಖ ಮುಖಂಡರ ಮೂಲಕ ಒತ್ತಡ ಹೇರುವ ಪ್ರಯತ್ನಗಳು ಸಹ ನಡೆದಿವೆ.

ಅ. 03 ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ, ಸಿಂಧಗಿಯಲ್ಲಿ ರಮೇಶ್ ಬೂಸನೂರಿಗೆ ಟಿಕೆಟ್

ಹಾನಗಲ್‌ ಕ್ಷೇತ್ರದಲ್ಲಿ ದಿವಂಗತ ಸಿ.ಎಂ.ಉದಾಸಿ ಸೊಸೆ ರೇವತಿ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವ ಬೇಡಿಕೆ ಇದೆ. ಒಂದು ವೇಳೆ ಪತ್ನಿ ರೇವತಿಗೆ ಟಿಕೆಟ್‌ ನೀಡದಿದ್ದರೆ ತಮಗೆ ಟಿಕೆಟ್‌ ನೀಡಬೇಕು ಎಂದು ಸಂಸದ ಶಿವಕುಮಾರ್‌ ಉದಾಸಿ ಬೇಡಿಕೆಯನ್ನಿಟ್ಟಿದ್ದಾರೆ. ಕುಟುಂಬ ರಾಜಕಾರಣಕ್ಕೆ ಆರ್‌ಎಸ್‌ಎಸ್‌ ಒಲವು ತೋರುತ್ತಿಲ್ಲ. ಹಾಗಾಗಿ ಹೊಸ ಮುಖಕ್ಕೆ ಮನ್ನಣೆ ಹಾಕುವ ಸಾಧ್ಯತೆ ಇದೆ.

Video Top Stories