
ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ವಿರೋಧ
ಪಿಎಸ್ಐ ನೇಮಕಾತಿ ಹಗರಣ ಕಿಂಗ್ ಪಿನ್ ಎನಿಸಿಕೊಂಡಿರುವ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಸಿಐಡಿ ಈ ಅರ್ಜಿಗೆ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರು (ಏ.25): ರಾಜ್ಯದಲ್ಲಿನ ಪಿಎಸ್ಐ ನೇಮಕಾತಿ ಹಗರಣದ (PSI Recruitment Scam) ಕಿಂಗ್ ಪಿನ್ ಎನಿಸಿಕೊಂಡಿರುವ ದಿವ್ಯಾ ಹಾಗರಗಿ (Divya Hagargi) ಈವರೆಗೂ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಸಾಧ್ಯವಾಗಿಲ್ಲ. ಈ ನಡುವೆ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ತಕಾರರು ಎತ್ತಿದೆ.
ಇದು ಸಂಘಟಿತ ಅಪರಾಧ ಎಂದು ಸಿಐಡಿ ಪರ ವಕೀಲರು ಹೇಳಿದ್ದು, ಹಾಗೇನಾದರೂ ಜಾಮೀನು ನೀಡಿದಲ್ಲಿ ಇವರಿಂದ ಸಾಕ್ಷಿನಾಶವಾಗಲಿದೆ ಎಂದು ಹೇಳಿದ್ದಾರೆ. ಈ ಐವರಿಗೆ ನಿರೀಕ್ಷಣಾ ಜಾಮೀನನ್ನು ಯಾವುದೇ ಕಾರಣಕ್ಕೂ ನೀಡಬೇಡಿ ಎಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
PSI Scam: ಇಷ್ಟು ದಿನಗಳಾದ್ರೂ ದಿವ್ಯಾ ಹಾಗರಗಿ ಅರೆಸ್ಟ್ ಯಾಕಿಲ್ಲ? ಶಾಸಕ ಪ್ರಶ್ನೆ
ಕಲಬುರಗಿ ಕೋರ್ಟ್ ಗೆ (Kalaburagi Court) ಸಿಐಡಿ ತಕರಾರು ಅರ್ಜಿ ಸಲ್ಲಿಕೆ ಮಾಡಿದೆ. ಆರೋಪಿ ದಿವ್ಯಾ ಹಾಗರಗಿ 15 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ದಿವ್ಯಾ ಹಾಗರಿಗಿ ಸೇರಿದಂತೆ ಐವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.