Asianet Suvarna News Asianet Suvarna News

Republic Day 2022: ಮಾಣೆಕ್ ಶಾ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ, ಜನತೆಗೆ ಸಂದೇಶ

ಇಂದು 73 ನೇ ಗಣರಾಜ್ಯೋತ್ಸವ (Republic Day 2022)ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ರಾಜ್ಯಪಾಲ (Govorner) ಗೆಹಲೋತ್ ಜನತೆಯನ್ನುದ್ದೇಶಿಸಿ ಸಂದೇಶ ನೀಡಿದ್ದಾರೆ. 

ಬೆಂಗಳೂರು (ಜ. 26): ಇಂದು 73 ನೇ ಗಣರಾಜ್ಯೋತ್ಸವ (Republic Day 2022)ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ರಾಜ್ಯಪಾಲ (Govorner) ಗೆಹಲೋತ್ ಜನತೆಯನ್ನುದ್ದೇಶಿಸಿ ಸಂದೇಶ ನೀಡಿದ್ದಾರೆ. 

Republic Day 2022: ಹಲವು ಹೊಸತನಗಳ ಗಣರಾಜ್ಯ ಸಂಭ್ರಮ

ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಎಆರ್‌, ಕೆಎಸ್‌ಐಎಸ್‌ಎಫ್‌, ಸಂಚಾರಿ ಪೊಲೀಸರು, ಮಹಿಳಾ ಪೊಲೀಸರು, ಗೃಹ ರಕ್ಷಕ ದಳ, ಟ್ರಾಫಿಕ್‌ ವಾರ್ಡನ್‌, ಅಗ್ನಿಶಾಮಕ ದಳದ ಸಿಬ್ಬಂದಿ, ಶ್ವಾನ ದಳ ಮತ್ತು ಬ್ಯಾಂಡ್‌ನ ಒಟ್ಟು 21 ತುಕಡಿಗಳಲ್ಲಿ ಸುಮಾರು 500 ಮಂದಿ ಕವಾಯತ್ತಿನಲ್ಲಿ ಭಾಗವಹಿಸಲಿದ್ದಾರೆ. 

ಕೋವಿಡ್‌ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳನ್ನು ವೀಕ್ಷಿಸಲು ಕೇವಲ 200 ಗಣ್ಯರಿಗೆ ಮಾತ್ರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆಹ್ವಾನಿತರು ಕಡ್ಡಾಯವಾಗಿ ಮುಖಗವುಸು ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕ್ರಮವಹಿಸಲಾಗಿದೆ.