ಕೊರೋನಾ ಲಕ್ಷಣ ಇಲ್ಲದವರ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧಾರ..!

ಆಘಾತಕಾರಿ ವಿಚಾರವೆಂದರೆ ರಾಜ್ಯದ ಶೇ.98% ಮಂದಿ ಸೋಂಕಿತರಿಗೆ ಕೋವಿಡ್ 19 ಸೋಂಕಿನ ಲಕ್ಷಣಗಳೇ ಕಾಣಿಸುತ್ತಿಲ್ಲ. ಹೀಗಿರುವಾಗಲೇ ಕೊರೋನಾ ಸೋಂಕಿನ ಲಕ್ಷಣ ಇಲ್ಲದವರ ಪರೀಕ್ಷೆ ನಡೆಸದಿರಲು ಸರ್ಕಾರ ತೀರ್ಮಾನಿಸಿದೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.06): ಜಿಲ್ಲೆಗಳು, ಏರಿಯಾಗಳು, ಗಲ್ಲಿಗಳು ಆಯ್ತು, ಈಗ ಕೊರೋನಾ ವೈರಸ್ ಮನೆ ಮನೆಗಳಿಗೆ ಲಗ್ಗೆಯಿಡಲಾರಂಭಿಸಿದೆ. ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಿರುವವರಿಗೂ ಕೊರೋನಾ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. 

ಇನ್ನೂ ಆಘಾತಕಾರಿ ವಿಚಾರವೆಂದರೆ ರಾಜ್ಯದ ಶೇ.98% ಮಂದಿ ಸೋಂಕಿತರಿಗೆ ಕೋವಿಡ್ 19 ಸೋಂಕಿನ ಲಕ್ಷಣಗಳೇ ಕಾಣಿಸುತ್ತಿಲ್ಲ. ಹೀಗಿರುವಾಗಲೇ ಕೊರೋನಾ ಸೋಂಕಿನ ಲಕ್ಷಣ ಇಲ್ಲದವರ ಪರೀಕ್ಷೆ ನಡೆಸದಿರಲು ಸರ್ಕಾರ ತೀರ್ಮಾನಿಸಿದೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೆಚ್ಚು ಪರೀಕ್ಷೆಗೆ ಒಳಪಡಿಸದಿದ್ದರೆ ಕೊರೋನಾ ವೈರಸ್ ಮನೆಮನೆಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಲಸಿಗರನ್ನು ತವರಿಗೆ ಕಳಿಸಲು 15 ದಿನ ಟೈಮ್‌!

ಇದೀಗ ಬೆಂಗಳೂರಿನಲ್ಲಿ ಬಿಬಿಎಂಪಿ ಮನೆ ಮನೆಗಳನ್ನೇ ಸೀಲ್‌ಡೌನ್ ಮಾಡುವ ನಿರ್ಧಾರಕ್ಕೆ ಬಂದಿದೆ. ಇನ್ಮುಂದೆ ಕಂಟೋನ್‌ಮೆಂಟ್ ವ್ಯಾಖ್ಯಾನ ಕೂಡಾ ಬದಲಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video