Asianet Suvarna News Asianet Suvarna News

ಹಲಾಲ್‌ Vs ಝಟ್ಕಾ ವಿವಾದಕ್ಕೆ ಬ್ರೇಕ್‌ ಹಾಕುತ್ತಾ ಸರ್ಕಾರದ ಸ್ಟಂನ್ನಿಂಗ್‌ ರೂಲ್ಸ್?‌

ಹಲಾಲ್‌ ಕಟ್ v/s ಝಟ್ಕಾ ಕಟ್ ನಡುವಿನ ವಿವಾದ ಮಧ್ಯೆ ಪಶುಪಾಲನಾ ಇಲಾಖೆ ಎಂಟ್ರಿ ಕೊಟ್ಟಿದ್ದು, ಆದೇಶದ ಪ್ರತಿಯೊಂದು ವೈರಲ್ ಆಗುತ್ತಿದೆ. ಇನ್ಮುಂದೆ ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವಾಗ ಸ್ಟನ್ನಿಂಗ್ (Stunning) ವಿಧಾನ ಕಡ್ಡಾಯಗೊಳಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶಿಸಿದ್ದಾರೆ.

ಹಲಾಲ್‌ ಕಟ್ v/s ಝಟ್ಕಾ ಕಟ್ ನಡುವಿನ ವಿವಾದ ಮಧ್ಯೆ ಪಶುಪಾಲನಾ ಇಲಾಖೆ ಎಂಟ್ರಿ ಕೊಟ್ಟಿದ್ದು, ಆದೇಶದ ಪ್ರತಿಯೊಂದು ವೈರಲ್ ಆಗುತ್ತಿದೆ. ಇನ್ಮುಂದೆ ಆಹಾರಕ್ಕಾಗಿ ಪ್ರಾಣಿ  ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವವರು ಇನ್ಮುಂದೆ  ಸ್ಟನ್ನಿಂಗ್ (Stunning) ವಿಧಾನ ಕಡ್ಡಾಯಗೊಳಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶಿಸಿದ್ದಾರೆ.  ಆದ್ರೆ, ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಮರು ಹಲಾಲ್ ಕಟ್ ಮಾಡಿಕೊಳ್ಳಲಿ ಬಿಡಿ, ಯಾಕೆ ವಿರೋಧಿಸ್ತೀರಾ? ಸಿದ್ದು ಪ್ರಶ್ನೆ

ಏನಿದು ಸ್ಟನ್ನಿಂಗ್ ಪ್ರಾಣಿ ವಧೆ ವಿಧಾನ ಎಂದು ನೋಡುವುದಾದರೆ,  ಇದು ಎಲೆಕ್ಟ್ರಿಕ್ ಸ್ಟನ್ನಿಂಗ್ ‌ಮಷಿನ್ ಬಳಸಿ ಪ್ರಾಣಿ ವಧೆ ಮಾಡುವ ವಿಧಾನ. ಕುರಿ, ಕೋಳಿಯ ತಲೆಗೆ ಸ್ಟನ್ನಿಂಗ್ ಮಷಿನ್ ಬಳಸಿದಾಗ ಮೆದುಳು ನಿಷ್ಕ್ರಿಯಗೊಳ್ಳುತ್ತವೆ. ಒಂದು ರೀತಿ ಎಲೆಕ್ಟ್ರಿಕ್ ಶಾಕ್ ಕೊಟ್ಟ ಹಾಗೆ. ಈ ವೇಳೆ ಕುರಿ, ಕೋಳಿಯ ಪ್ರಜ್ಞೆ ತಪ್ಪುತ್ತದೆ. ಈ ವೇಳೆ ವಧೆ ಮಾಡುವುದರಿಂದ ಪ್ರಾಣಿಗಳಿಗೆ ನೋವಾಗುವುದಿಲ್ಲ. ಯಾವುದೇ ಮಾಂಸದ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ, ಅನೇಕ ದೂರುಗಳು ಪಶುಪಾಲನಾ ಇಲಾಖೆಗೆ ಬಂದಿತ್ತು. ಈ ಬಗ್ಗೆ ಒಂದು ವರದಿ ಇಲ್ಲಿದೆ.