ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ 6 ಎಂಎಲ್‌ಸಿಗಳು ಹಿಂದೇಟು
- ಡಿ.10 ಕ್ಕೆ 25 ಎಂಎಲ್‌ಸಿ ಸ್ಥಾನಗಳಿಗೆ ಚುನಾವಣೆ, ಡಿ.14ಕ್ಕೆ ಫಲಿತಾಂಶ
- ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಆಯ್ಕೆ
- ಕಾಂಗ್ರೆಸ್ 14, ಬಿಜೆಪಿ 6, ಜೆಡಿಎಸ್ 4, ಪಕ್ಷೇತರ 1 ಸ್ಥಾನ ತೆರವು
ಬೆಂಗಳೂರು (ನ. 10): ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ (Legislative Council ) 25 ಸ್ಥಾನಗಳಿಗೆ ಡಿ. 10 ರಂದು ಚುನಾವಣೆ ನಡೆಯಲಿದೆ. ತೆರವಾಗುತ್ತಿರುವ ಒಟ್ಟು 25 ಸ್ಥಾನಗಳ ಪೈಕಿ ಕಾಂಗ್ರೆಸ್ 14, ಬಿಜೆಪಿ 6, ಜೆಡಿಎಸ್ 4 ಸ್ಥಾನಗಳನ್ನು ಹೊಂದಿದ್ದವು.
ಶೀಘ್ರದಲ್ಲೇ ಬರಲಿದೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಜೀವನ ಚರಿತ್ರೆ ಪುಸ್ತಕ
ಮೇಲ್ಮನೆ ಸ್ಪರ್ಧೆಗೆ ಕಾಂಗ್ರೆಸ್‌ನ 6 ಎಂಎಲ್‌ಸಿಗಳು ನಿರಾಕರಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಲವು ತೋರಿಸಿದ್ದಾರೆ. ಜೊತೆಗೆ ಎಂಎಲ್‌ಸಿ ಚುನಾವಣೆಗೆ ಖರ್ಚು ಜಾಸ್ತಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ದಕ್ಷಿಣ ಕನ್ನಡ ಪ್ರತಾಪ್ ಶೆಟ್ಟಿ, ಉತ್ತರ ಕನ್ನಡ ಎಸ್ ಎಲ್ ಘೋಟ್ನೆಕರ್, ಹಾಸನದ ಗೋಪಾಲಸ್ವಾಮಿ, ಬೀದರ್‌ನ ವಿಜಯ್ ಸಿಂಗ್, ಬೆಂಗಳೂರು ಗ್ರಾಮಾಂತರದ ಎಂ ನಾರಾಯಣ, ಚಿತ್ರದುರ್ಗದ ರಘು ಆಚಾರ್ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ.