ಸಂಪುಟ ವಿಸ್ತರಣೆ: ವಿಜಯೇಂದ್ರಗೆ ಸ್ಥಾನ ಸಿಗುತ್ತಾ.? ರೇಸ್‌ನಲ್ಲಿರುವವರ ಪಟ್ಟಿ ಇಲ್ಲಿದೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಕಾಲ ಕೂಡಿಬಂದಿದ್ದು, ಏ.24 ಅಥವಾ 25ರಂದು ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಪುನಾರಚನೆ ದೊಡ್ಡ ಮಟ್ಟದಲ್ಲಿರುತ್ತದೆಯೋ ಅಥವಾ ಸಣ್ಣ ಬದಲಾವಣೆಯೋ ಎಂಬುದು ಬಿಜೆಪಿ ಕಾರ್ಯಕಾರಣಿ (BJP Core Committe Meeting) ಸಭೆಯ ನಂತರವೇ ಸ್ಪಷ್ಟವಾಗಲಿದೆ

Share this Video
  • FB
  • Linkdin
  • Whatsapp

ಬೆಂಗಳೂರು (ಏ. 15): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಕಾಲ ಕೂಡಿಬಂದಿದ್ದು, ಏ.24 ಅಥವಾ 25ರಂದು ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಪುನಾರಚನೆ ದೊಡ್ಡ ಮಟ್ಟದಲ್ಲಿರುತ್ತದೆಯೋ ಅಥವಾ ಸಣ್ಣ ಬದಲಾವಣೆಯೋ ಎಂಬುದು ಬಿಜೆಪಿ ಕಾರ್ಯಕಾರಣಿ (BJP Core Committe Meeting) ಸಭೆಯ ನಂತರವೇ ಸ್ಪಷ್ಟವಾಗಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜೀನಾಮೆಗೂ ಮುನ್ನ ಈಶ್ವರಪ್ಪ ಶಕ್ತಿ ಪ್ರದರ್ಶನ

ಈ ಬಾರಿ ಸಂಪುಟ ಸೇರುವ ಸೇನಾನಿಗಳು ಯಾರು ಎಂಬ ಪ್ರಶ್ನೆ ಸಹಜವಾಗಿದೆ. ಸಂಪುಟ ಸೇರುವವರ ಸಂಭಾವ್ಯ ಪಟ್ಟಿ (Probabal List) ಏಷ್ಯನೆಟ್ ಸುವರ್ಣ ನ್ಯೂಸ್ ಬಳಿಯಿದೆ. 6 ರಿಂದ 7 ಸ್ಥಾನಗಳಿಗೆ ತೀವ್ರ ಪೈಪೋಟಿಯಿದೆ. ವಿಜಯೇಂದ್ರಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ಸಣ್ಣ ಮಟ್ಟದ ಪುನಾರಚನೆಗೆ ಹೈಕಮಾಂಡ್‌ ಸೂಚಿಸಿದರೆ ಆಗ ಮುಖ್ಯಮಂತ್ರಿಯವರು ಒಬ್ಬರು ಅಥವಾ ಇಬ್ಬರು ಸಚಿವರಿಂದ ರಾಜೀನಾಮೆ ಪಡೆಯಲಿದ್ದಾರೆ. ಆಗ 6-7 ಸ್ಥಾನಗಳು ಖಾಲಿಯಾಗಲಿದೆ. ಈ 6-7 ಸ್ಥಾನಗಳಿಗೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಇದ್ದು, ಭಾರಿ ಲಾಬಿ ಸಹ ತೆರೆಮರೆಯಲ್ಲಿ ನಡೆಯುತ್ತಿದೆ.

Related Video