Asianet Suvarna News

ಬೆಲ್ಲದ್ ಫೋನ್ ಟ್ಯಾಪಿಂಗ್ ಬಾಂಬ್; ಯಾರದು ಯುವರಾಜ ಸ್ವಾಮಿ..?

Jun 18, 2021, 11:01 AM IST

ಬೆಂಗಳೂರು (ಜೂ. 18): ರಾಜ್ಯ ರಾಜಕೀಯದಲ್ಲಿ ಶಾಸಕ ಅರವಿಂದ್ ಬೆಲ್ಲದ್  ಸುದ್ದಿಯಲ್ಲಿದ್ದಾರೆ. ದಿಢೀರ್ ದೆಹಲಿ ಭೇಟಿ ಬಳಿಕ ಫೋನ್‌ ಕದ್ದಾಲಿಕೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ನನ್ನ ಫೋನ್ ಕದ್ದಾಲಿಕೆ ಮಾಡಿ ನನ್ನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದ್ದು, ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಬೇಕು ಎನ್ನುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಲ್ಲದ್ ಫೋನ್ ಟ್ಯಾಪ್ ಆರೋಪದ ಹಿಂದಿನ ಕತೆ ಹೇಳಿದ ರೇಣುಕಾಚಾರ್ಯ

ಯುವರಾಜ ಸ್ವಾಮಿ ಎಂಬಾತ ನನಗೆ ಮಾತ್ರವಲ್ಲದೇ, ನನ್ನ ಆಪ್ತ ಸಹಾಯಕನ ಮೊಬೈಲ್‌ಗೂ ಪದೇ ಪದೇ ಕರೆ ಮಾಡುತ್ತಿದ್ದ. ಇದರಲ್ಲಿ ಮೇಲ್ನೋಟಕ್ಕೆ ಯಾವುದೋ ಬಲವಾದ ಕಾಣದ ಕೈಗಳ ಕೈವಾಡ ಇದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನಮ್ಮ ಮೊಬೈಲ್‌ಗಳು ಟ್ಯಾಪ್‌ ಆಗಿ ಕದ್ದಾಲಿಕೆಯಾಗುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಎಲ್ಲಾ ಅಂಶಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಹೇಳಿದ್ದಾರೆ.