Asianet Suvarna News Asianet Suvarna News

ಇಂದು ಬೆಂಗಳೂರಿಗೆ ಅರುಣ್ ಸಿಂಗ್, ಸಭೆ ಬಗ್ಗೆ ಭಾರೀ ಕುತೂಹಲ, ಶಮನವಾಗುತ್ತಾ ಮುನಿಸು.?

Jun 16, 2021, 12:31 PM IST

ಬೆಂಗಳೂರು (ಜೂ. 16): ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ.  ಸಂಜೆ ಮೊದಲಿಗೆ ಎಲ್ಲ ಸಚಿವರ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಸಚಿವರ ಸಾಧನೆಗಳ ಪರಾಮರ್ಶೆಯೂ ಮಾಡಲಿದ್ದಾರೆ.

ಅರುಣ್ ಸಿಂಗ್ ಆಗಮನಕ್ಕೂ ಮುನ್ನ ಸಿಎಂ ನಿವಾಸಕ್ಕೆ ಸಚಿವರ ದೌಡು

ಜತೆಗೆ ಹಲವು ಸಲಹೆ ಸೂಚನೆಗಳನ್ನೂ ನೀಡಲಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಉಪಸ್ಥಿತರರಿಲಿದ್ದಾರೆ. ಸರ್ಕಾರದ ದೃಷ್ಟಿಯಿಂದ ಈ ಮೂರು ದಿನಗಳ ಸರಣಿ ಸಭೆ ಮಹತ್ವದ್ದಾಗಿದ್ದು, ಇದರ ಆಧಾರದ ಮೇಲೆಯೇ ಪ್ರಸಕ್ತ ನಾಯಕತ್ವದ ಬಗ್ಗೆ ಉದ್ಭವಿಸಿರುವ ಗೊಂದಲಗಳಿಗೂ ಸ್ಪಷ್ಟತೆ ಸಿಗಲಿದೆ ಎಂದು ತಿಳಿದು ಬಂದಿದೆ.