Asianet Suvarna News Asianet Suvarna News

ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?

ಬೆಂಗಳೂರು ಬಂದ್ ಮುಗೀತು. ಈಗ ಕರ್ನಾಟಕ ಸ್ತಬ್ಧಕ್ಕೆ ಸಂಘಟನೆಗಳು ನಿರ್ಧರಿಸಿವೆ. ಕಾವೇರಿಗಾಗಿ ಶುಕ್ರವಾರ ಅಖಂಡ ಕರುನಾಡಿಗೆ ಬೀಗ ಹಾಕಲು ಪ್ಲಾನ್ ಮಾಡಿದ್ದು, ವಾಟಳ್ ನಾಗಾರಾಜ್ ನೇತೃತ್ವದಲ್ಲಿ ದೊಡ್ಡ ಹೋರಾಟ ಮಾಡಲು ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.
 

First Published Sep 27, 2023, 10:08 AM IST | Last Updated Sep 27, 2023, 10:08 AM IST

ಕಾವೇರಿ ನೀರಿಗಾಗಿ ಸಂಘಟನೆಗಳ ಆಕ್ರೋಶ ಕಿಚ್ಚು ಹೆಚ್ಚಾಗಿದೆ. ಸರ್ಕಾರ ವಿರುದ್ಧ ವಿಭಿನ್ನವಾಗಿ ಕನ್ನಡಿಗರು ಹೋರಾಟ ಮಾಡ್ತಿದ್ದಾರೆ. ಕಾವೇರಿ ನೀರಿಗಾಗಿ ನಿನ್ನೆ ಇಡೀ ಬೆಂಗಳೂರು ಬಂದ್(Bengaluru Bandh) ಮಾಡಿದ್ರೆ. ಇತ್ತ ಶುಕ್ರವಾರ ಮತ್ತೊಂದು ಬಂದ್‌ಗೆ ಸಂಘಟನೆಗಳು ಸಿದ್ಧವಾಗ್ತಿವೆ. ರೈತ ನಾಯಕ ಕರುಬೂರು ಶಾಂತಕುಮಾರ್ (Karuburu Shanthakumar) ನೇತೃತ್ವದಲ್ಲಿ ಬೆಂಗಳೂರಿಗೆ ಸಂಘಟನೆಗಳು ಬೀಗ ಹಾಕಿದ್ರೆ. ಶುಕ್ರವಾರ ವಾಟಳ್ ನಾಗರಾಜ್(Vatal Nagaraj) ಸಾರಥ್ಯದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ(Karnataka Bandh) ಮುಂದಾಗಿದ್ದಾರೆ. ಒಂದೇ ವಾರದಲ್ಲಿ ಕರುನಾಡು ಮಂದಿಗೆ ಮತ್ತೊಂದು ಬಂದ್ ಶಾಕ್ ಎದುರಾಗಿದೆ. ಕಾವೇರಿಗಾಗಿ ಬಂದ್ ಮಾಡುವ ವಿಚಾರಕ್ಕೆ ಸಂಘಟನೆಗಳ ಮಧ್ಯೆಯೇ ಬಿರುಕು ಮೂಡಿತ್ತು. ಅಷ್ಟೇ ಅಲ್ಲ ಕೆಲ ಸಂಘಟನೆಗಳು ಬೆಂಗಳೂರು ಬಂದ್‌ಗೆ ಸಾಥ್ ಕೊಟ್ರೆ. ಇನ್ನು ಸಂಘಟನೆಗಳು ಕರ್ನಾಟಕ ಬಂದ್‌ಗೆ ಸಪೋರ್ಟ್‌ ಮಾಡ್ತೀವಿ ಅಂತಾ ಬೆಂಗಳೂರು ಬಂದ್‌ಗೆ ನೈತಿಕ ಬೆಂಬಲ ಘೋಷಿಸಿದ್ವು..ಹೀಗಾಗಿ ಕರವೇ ಬಣ ಸೇರಿದಂತೆ ವಾಟಳ್ ನಾಗರಾಜ್ ನೇತೃತ್ವದ ಹಲವು ಬಣಗಳು ಸೆ.29ರಂದು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ  ಸಿದ್ಧತೆ ಮಾಡಿಕೊಳ್ತಿದ್ದಾರೆ. ಕಾವೇರಿ ಉಳಿವಿಗಾಗ ರೋಷಾಗ್ನಿ ಜೋರಾಗಿದೆ. ಕನ್ನಡಿಗರ ಆಕ್ರೋಶದ ಕಿಚ್ಚು ತಾರಕ್ಕೇರಿದೆ. ಇದರ ಮಧ್ಯೆಯೇ ನಿನ್ನೆ ಮತ್ತೆ CWRC ತಮಿಳುನಾಡಿಗೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿದೆ. ಇದು ಕರ್ನಾಟಕದಲ್ಲಿನ ಕಾವೇರಿ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ನಮಗೆ ಕುಡಿಯೋಕೆ ನೀರಿಲ್ಲ..ಹೇಗೆ ಬಿಡೋಕೆ ಆಗುತ್ತೆ ಅಂತಾ ವಾಟಳ್ ನಾಗರಾಜ್ ನೇತೃತ್ವದಲ್ಲಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ ಸತ್ಯಾಗ್ರಹ ಮಾಡಲು ಕೂಡ ಪ್ಲಾನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೈಸೂರಿನಲ್ಲಿ ವಿವಾದ ಎಬ್ಬಿಸಿದ ಪ್ರಭಾಸ್ ಮೇಣದ ಪ್ರತಿಮೆ !

Video Top Stories