ಕನ್ನಡಿಗರಾಗಿ ಜೀವನದಲ್ಲಿ ನೀವು ನೋಡಲೇಬೇಕಾದ ಏಳು ಅದ್ಭುತಗಳಿವು, ಹೇಳಿದ್ದು ನಾವಲ್ಲ ನೀವು!

ಜಗತ್ತಿನ ಏಳು ಅದ್ಭುತಗಳು ಎಂದಾಗ ಬಹುತೇಕ ಅದನ್ನು ಅಂದಾಜು ಮಾಡುವವರಿದ್ದಾರೆ. ಆದರೆ, ಕರ್ನಾಟಕದ ಏಳು ಅದ್ಭುತಗಳು ಯಾವುದು ಎಂದಾಗ, ಯೋಚನೆ ಆರಂಭವಾಗುತ್ತದೆ. ಇದನ್ನು ಬಗೆಹರಿಸುವ ಸಲುವಾಗಿಯೇ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ರಾಜ್ಯದ 7 ಅದ್ಬುತಗಳನ್ನು ಗುರುತಿಸಲು ಕಳೆದ ಒಂದು ವರ್ಷದಿಂದ ಅಭಿಯಾನ ಆರಂಭಿಸಿತ್ತು.

First Published Feb 26, 2023, 9:49 PM IST | Last Updated Feb 26, 2023, 9:49 PM IST

ಬೆಂಗಳೂರು (ಫೆ.26): ಜಗತ್ತಿನ ಅದ್ಭುತಗಳು ಎಂದಾಗ ಖಂಡಿತವಾಗಿ ನಮ್ಮ ಕಿವಿ ನೆಟ್ಟಗಾಗುತ್ತದೆ. ಈಗ ಅದೇ ಹೆಮ್ಮೆಯನ್ನು ಕನ್ನಡಿಗರು ಅನುಭವಿಸಲಿದ್ದಾರೆ. ಯಾಕೆಂದರೆ, ಕಳೆದ ಒಂದು ವರ್ಷದಿಂದ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ರಾಜ್ಯದ 7 ಅದ್ಭುತಗಳನ್ನು ಗುರುತಿಸುಬ ಪ್ರಕ್ರಿಯೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ.

ರಾಜ್ಯಾದ್ಯಂತ ವಿವಿಧ ವರ್ಗದವರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾದ ರಾಜ್ಯದ 7 ಅದ್ಭುತಗಳನ್ನು ಗುರುತಿಸುವ ಅಭಿಯಾನ ಅಂತ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಣೆ ಮಾಡಿದ್ದಾರೆ.

ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಬಿಡುಗಡೆ, ಇಲ್ಲಿದೆ ಸಪ್ತ ತಾಣಗಳ ಸುಂದರ ಲೋಕ!

ರಾಜ್ಯದ ಜನರು ಮತಗಳ ಮೂಲಕ ತಮ್ಮ ತಮ್ಮ ಊರಿನ ಅದ್ಭುತಗಳಿಗೆ ಮತ ಚಲಾಯಿಸಿದ್ದರು. ಲಕ್ಷ ಲಕ್ಷ ಮತಗಳು ಒಂದೊಂದು ತಾಣಕ್ಕೆ ಸಿಕ್ಕಿದೆ. ಈ ಕರ್ನಾಟಕದ 7 ಅದ್ಭುತಗಳನ್ನು ಬೊಮ್ಮಾಯಿ ಘೋಷಣೆ ಮಾಡಿದರು. 

Video Top Stories