Asianet Suvarna News Asianet Suvarna News
breaking news image

ವಿವಾದಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ರವಿಬೆಳಗೆರೆಯವರದ್ದು : ಟಿಎನ್‌ಎಸ್

'ರವಿ ಬೆಳಗೆರೆಯನ್ನು ಕಳೆದುಕೊಂಡಿದ್ದು ಬಹಳ ನೋವಿನ ವಿಚಾರ. ಅದ್ಭುತ ವ್ಯಕ್ತಿತ್ವ ಅವರದ್ದು. ಸ್ವಂತ ಬದುಕಿನಲ್ಲಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿರಬಹುದು. ಅದೆಲ್ಲವನ್ನು ಮೀರಿ ಬೆಳೆದಿದ್ದರು: ಟಿಎನ್‌ಎಸ್

ಬೆಂಗಳೂರು (ನ. 13): ಪತ್ರಕರ್ತರಾಗಿ, ಲೇಖಕರಾಗಿ, ನಟರಾಗಿ, ನಿರೂಪಕರಾಗಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ 12. 15 ನಿಮಿಷಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಪ್ರಾರ್ಥನಾ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. 

ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರನ್ನೂ ನಗಿಸ್ತಾ, ನಗ್ತಾ ಇರ್ತಿದ್ರು: ದೀಪಿಕಾ ದಾಸ್

'ರವಿ ಬೆಳಗೆರೆಯನ್ನು ಕಳೆದುಕೊಂಡಿದ್ದು ಬಹಳ ನೋವಿನ ವಿಚಾರ. ಅದ್ಭುತ ವ್ಯಕ್ತಿತ್ವ ಅವರದ್ದು. ಸ್ವಂತ ಬದುಕಿನಲ್ಲಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿರಬಹುದು. ಅದೆಲ್ಲವನ್ನು ಮೀರಿ ಬೆಳೆದಿದ್ದರು. ಅವರಿಗೆ ಗೊತ್ತಿಲ್ಲದ ವಿಚಾರಗಳೇ ಇರಲಿಲ್ಲ. ಅವರ ಜೊತೆ ಮಾತನಾಡಲು ಕುಳಿತರೆ ಅದ್ಭುತ ಮಾತುಗಾರ. ಮತ್ತೆ ಮಾತನಾಡಲು ಇವರು ಸಿಗುವುದೇ ಇಲ್ಲವಲ್ಲ ಎನ್ನುವ ಭಾವನೆಯನ್ನು ಹುಟ್ಟು ಹಾಕುತ್ತಿದ್ದರು' ಎಂದು ನಿರ್ದೇಶಕ ಟಿಎನ್ ಸೀತಾರಾಮ್ ಸ್ಮರಿಸಿಕೊಂಡಿದ್ದಾರೆ. 

Video Top Stories