Asianet Suvarna News Asianet Suvarna News

ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರನ್ನೂ ನಗಿಸ್ತಾ, ನಗ್ತಾ ಇರ್ತಿದ್ರು: ದೀಪಿಕಾ ದಾಸ್

ಬಿಗ್‌ಬಾಸ್ ಸ್ಪರ್ಧಿ, ನಟಿ ದೀಪಿಕಾ ದಾಸ್ ರವಿ ಬೆಳಗೆರೆ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. 
 

ಬೆಂಗಳೂರು (ನ. 13): ಪತ್ರಕರ್ತರಾಗಿ, ಲೇಖಕರಾಗಿ, ನಟರಾಗಿ, ನಿರೂಪಕರಾಗಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ 12. 15 ನಿಮಿಷಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಪ್ರಾರ್ಥನಾ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. 

ಬೆಳಗೆರೆ ಹೊರಗಡೆ ಹುಲಿಯಂತಿದ್ರೂ, ಹೃದಯದಲ್ಲಿ ಮಗುವಾಗಿದ್ದ, ಅದ್ಭುತ ವ್ಯಕ್ತಿತ್ವ ಅವರದ್ದು: ಶ್ಯಾಂ ಸುಂದರ್

ಬಿಗ್‌ಬಾಸ್ ಸ್ಪರ್ಧಿ, ನಟಿ ದೀಪಿಕಾ ದಾಸ್ ರವಿ ಬೆಳಗೆರೆ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. 

'ಹೊರ ಜಗತ್ತಿನಲ್ಲಿ ರವಿ ಬೆಳಗೆರೆ ಬಗ್ಗೆ ಒಂದು ಅಭಿಪ್ರಾಯ ಇತ್ತು. ಆದರೆ ಬಿಗ್‌ಬಾಸ್ ಮನೆಯಲ್ಲಿ ಅವರು ಹಾಗಿರಲಿಲ್ಲ. ಎಲ್ಲರನ್ನೂ ನಗಿಸ್ತಾ ಇದ್ರು. ಮೃದು ಮಾತುಗಾರ. ಅವರು ಜೊತೆಗಿದ್ದಾಗ ನಾವೆಲ್ಲಾ ಖುಷಿಯಾಗಿರ್ತಾ ಇದ್ವಿ. ಸಮಯ ಹೋಗಿದ್ದೇ ಗೊತ್ತಾಗ್ತಾ ಇರಲಿಲ್ಲ. ನಮಗೆಲ್ಲಾ ಗೈಡ್ ಮಾಡ್ತಾ ಇದ್ದರು' ಎಂದು ದೀಪಿಕಾ ದಾಸ್ ಹೇಳಿದ್ದಾರೆ. 

 

Video Top Stories