ಪುನೀತ್ ರಾಜ್‌ಕುಮಾರ್ ಕೊನೆಯ ಕ್ಷಣ ಹೇಗಿತ್ತು..? ಚಿಕಿತ್ಸೆ ನೀಡಿದ ಡಾ. ರಮಣ್‌ ರಾವ್ ಮಾತು

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಪುನೀತ್ ಅವರ ಕೊನೆಯ ಕ್ಷಣ ಹೇಗಿತ್ತು ಎಂದು ನೋಡುವುದಾದರೆ, ಶುಕ್ರವಾರ ಬೆಳಿಗ್ಗೆ ಎದ್ದು ಜಾಗಿಂಗ್‌ಗೆ ಹೋಗುವಾಗ ಎದೆನೋವು ಕಾಣಿಸಿಕೊಂಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 30): 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ (Puneeth Rajkumar) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಪುನೀತ್ ಅವರ ಕೊನೆಯ ಕ್ಷಣ ಹೇಗಿತ್ತು ಎಂದು ನೋಡುವುದಾದರೆ, ಶುಕ್ರವಾರ ಬೆಳಿಗ್ಗೆ ಎದ್ದು ಜಾಗಿಂಗ್‌ಗೆ ಹೋಗುವಾಗ ಎದೆನೋವು ಕಾಣಿಸಿಕೊಂಡಿದೆ. ಆಗ ನೀರು ಕುಡಿದು ಜಿಮ್‌ಗೆ ಹೋಗಿದ್ದಾರೆ. ಸುಸ್ತು ಹೆಚ್ಚಾದಾಗ ಹತ್ತಿರದ ಡಾ.ರಮಣರಾವ್​ ಕ್ಲಿನಿಕ್‌ಗೆ ಹೋಗಿದ್ಧಾರೆ. 

ಅಭಿಮಾನಿ ದೇವರುಗಳನ್ನು ಬಿಟ್ಟು ಹೊರಟ 'ಯುವರತ್ನ'; ಮುಗಿಲು ಮುಟ್ಟಿದ ಆಕ್ರಂದನ

'ಬೆಳಗ್ಗೆ 10ಕ್ಕೆ ಪುನೀತ್, ಅಶ್ವಿನಿ ಕ್ಲಿನಿಕ್ ಗೆ ಬಂದರು. ಪುನೀತ್ ಬೆವರುತ್ತಿದ್ದರು. ಸ್ವಲ್ಪ ಆಯಾಸ ಎಂದು ಹೇಳಿದ್ರು. ನಾನು ಇಸಿಜಿ ಮತ್ತಿತರ ಪರೀಕ್ಷೆ ಗಳನ್ನು ಮಾಡಿದೆ. ಇಸಿಜಿಯಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿತು. ಕೂಡಲೇ ಅಡ್ಮಿಟ್ ಆಗಿ ಎಂದು ಪುನೀತ್​ಗೆ ಸಲಹೆ ನೀಡಿದೆ. ಪುನೀತ್ ಕೇವಲ 5 ನಿಮಿಷಗಳಲ್ಲಿ ವಿಕ್ರಂ ಆಸ್ಪತ್ರೆ ತಲುಪಿದರು. ಪುನೀತ್ ಸಾವಿಗೆ ಬೇರೆ ಆರೋಗ್ಯ ಸಮಸ್ಯೆಗಳು ಕಾರಣ ಇರಬಹುದು. ನಿಜಕ್ಕೂ ಇದೊಂದು ಆಘಾತಕಾರಿ ವಿಚಾರ' ಎಂದು ಸುವರ್ಣ ನ್ಯೂಸ್​ ಬಳಿ ಡಾ.ರಮಣರಾವ್​ ನೋವಿನಿಂದ ಮಾತನಾಡಿದರು. 


Related Video