
ದುಡ್ಡು ಕೊಟ್ಟಿದ್ದು ನಿಜವಾಗಿದ್ರೆ ಜಮೀರ್ ಹೇಳಿದಂತೆ ಕೇಳುತ್ತೇವೆ: ಚಂದ್ರು ಕುಟುಂಬ
ಶಾಸಕ ಜಮೀರ್ ವಿರುದ್ಧ ಹತ್ಯೆಯಾದ ಚಂದ್ರು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. 'ಸೈಮನ್‌ಗೆ ದುಡ್ಡು ಕೊಟ್ಟಿದ್ದಾರೆ ಎಂದಿದ್ದಾರೆ ಜಮೀರ್, ನಮಗೆ ಯಾರೂ ಒಂದು ರೂಪಾಯಿ ಕೊಟ್ಟಿಲ್ಲ. ಯಾರು ದುಡ್ಡು ಕೊಟ್ಟಿದ್ದು ಎಂದು ಜಮೀರ್ ಬಂದು ಹೇಳಲಿ. ದುಡ್ಡು ಕೊಟ್ಟಿದ್ದು ನಿಜವಾದರೆ ಜಮೀರ್ ಹೇಳಿದಂತೆ ಕೇಳುತ್ತೇವೆ' ಎಂದು ಚಂದ್ರು ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ. 10): ಶಾಸಕ ಜಮೀರ್ ವಿರುದ್ಧ ಹತ್ಯೆಯಾದ ಚಂದ್ರು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. 'ಸೈಮನ್‌ಗೆ ದುಡ್ಡು ಕೊಟ್ಟಿದ್ದಾರೆ ಎಂದಿದ್ದಾರೆ ಜಮೀರ್, ನಮಗೆ ಯಾರೂ ಒಂದು ರೂಪಾಯಿ ಕೊಟ್ಟಿಲ್ಲ. ಯಾರು ದುಡ್ಡು ಕೊಟ್ಟಿದ್ದು ಎಂದು ಜಮೀರ್ ಬಂದು ಹೇಳಲಿ. ದುಡ್ಡು ಕೊಟ್ಟಿದ್ದು ನಿಜವಾದರೆ ಜಮೀರ್ ಹೇಳಿದಂತೆ ಕೇಳುತ್ತೇವೆ' ಎಂದು ಚಂದ್ರು ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂತ್ - ಬೊಮ್ಮಾಯಿ ಭೇಟಿ, ಜೆಜೆ ನಗರ ಚಂದ್ರು ಕೊಲೆ ಕೇಸ್ ಸಿಐಡಿಗೆ ವರ್ಗಾವಣೆ
ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಚಂದ್ರು ಹತ್ಯೆಯಾಗಿದೆ ಎಂಬುದು ಸತ್ಯ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿರುವುದು ನೂರಕ್ಕೆ ನೂರರಷ್ಟುಸುಳ್ಳು. ಈ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.