Asianet Suvarna News Asianet Suvarna News

6 ಮೃತ ಕಾರ್ಮಿಕರ ನೇತ್ರದಾನ ಮಾಡಿದ ಕುಟುಂಬಸ್ಥರು!

ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ  ಸಾವನಪ್ಪಿದ ಕಾರ್ಮಿಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 6 ಮಂದಿಯ ಕುಟುಂಬಸ್ಥರು ನೇತ್ರದಾನ ಮಾಡಿದ್ದಾರೆ
 

First Published Aug 25, 2022, 8:27 PM IST | Last Updated Aug 25, 2022, 8:27 PM IST

ಬೆಂಗಳೂರು (ಆ. 25): ತುಮಕೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವು ಕಂಡ ಕಾರ್ಮಿಕರ ಕುಟುಂಬಸ್ಥರು, ಪ್ರೀತಿ ಪಾತ್ರರ ಸಾವಿನ ವೇಳೆಯಲ್ಲೂ ಸಾರ್ಥಕಥೆ ಮೆರೆದಿದ್ದಾರೆ. 6 ಮಂದಿಯ ಕುಟುಂಬಸ್ಥರು ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.

ಗುರುವಾರ ಬೆಳಗ್ಗೆ ಶಿರಾದಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವು ಕಂಡಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಇವರ ನೇತ್ರದಾನ ಮಾಡಲಾಗಿದೆ. ಅಪಘಾತದಲ್ಲಿ ಮೃತರಾದ ಇಬ್ಬರು ಮಹಿಳೆಯರು ಒಂದು ಮಗು ಹಾಗೂ ಮೂವರು ಪುರುಷರು ಕಣ್ಣುಗಳನ್ನು ದಾನ ಮಾಡಲಾಗಿದೆ. ಕ್ರೂಸರ್‌ ಚಾಲಕನ ನಿರ್ಲಕ್ಷ್ಯದಿಂದಾಗಿ 9 ಮಂದಿ ಬಡ ಜೀವಗಳು ಬಲಿಯಾಗಿದ್ದವು.

Karnataka Accident News: ಭೀಕರ ಅಪಘಾತ; ರಾಯಚೂರು ಮೂಲದ 9 ಮಂದಿ ಸ್ಥಳದಲ್ಲೇ ದುರ್ಮರಣ!

ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದರ ನಡುವೆಯೂ ನೇತ್ರದಾನದ ನಿರ್ಧಾರವನ್ನು ಅವರ ಕುಟುಂಬಸ್ಥರು ತೆಗೆದುಕೊಂಡಿದ್ದಾರೆ. ಇದರ ನಡುವೆ ಅಪಘಾತದಲ್ಲಿ ಮೃತಪಟ್ಟವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಅದರೊಂದಿಗೆ ಗಾಯಾಳುಗಳ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Video Top Stories