Karnataka Accident News: ಭೀಕರ ಅಪಘಾತ; ರಾಯಚೂರು ಮೂಲದ 9 ಮಂದಿ ಸ್ಥಳದಲ್ಲೇ ದುರ್ಮರಣ!
- ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಭೀಕರ ಅಪಘಾತ
- ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್ ನಡುವೆ ಸಂಭವಿಸಿದ ಈ ಅಪಘಾತ
- ಮೂವರು ಮಕ್ಕಳು ಸೇರಿ 9 ಮಂದಿ ಸ್ಥಳದಲ್ಲೇ ದುರ್ಮರಣ, 12ಕ್ಕೂ ಹೆಚ್ಚು ಮಂದಿ ಗಂಭೀರ ಗಾಯ, ನಾಲ್ವರು ಸ್ಥಿತಿ ಗಂಭೀರ
- ಮೃತರೆಲ್ಲರೂ ರಾಯಚೂರು ಮೂಲದ ಕಾರ್ಮಿಕರು.
ತುಮಕೂರು ಆ.25: ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್ ನಡುವೆ ಸಂಭವಿಸಿದ ಈ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗು ಸಾಧ್ಯತೆ ಇದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಉತ್ತರ ಕರ್ನಾಟಕ, ರಾಯಚೂರು ಮೂಲದವರಾಗಿದ್ದು, ಬೆಂಗಳೂರಿಗೆ ಕೂಲಿ ಕೆಲಸಕ್ಕೆ ನಿನ್ನೆ ತಡರಾತ್ರಿ ಹೊರಟಿದ್ದರು. ಈ ವೇಳೆ ತುಮಕೂರು ಬಳಿ ಅಪಘಾತ ಸಂಭವಿಸಿದೆ.
ಪಾವಗಡ ಅಪಘಾತ ಕೇಸ್: ಮೃತರ ಸಂಖ್ಯೆ 7 ಕ್ಕೇರಿಕೆ, ಮಗನ ಕಳ್ಕೊಂಡು ಪೋಷಕರ ಕಣ್ಣೀರು
ರಾಯಚೂರು ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಕಾರ್ಮಿಕರು. ಟೆಂಪೋ ಟ್ರ್ಯಾಕ್ಸ್. ಬೆಳಗಿನ ಜಾವ 4.30ರ ಸಮಯ ನಡೆದಿರುವ ಅಪಘಾತ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಟೆಂಪೋದಲ್ಲಿದ್ದಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರನ್ನು ತುಂಬಿಕೊಂಡು ವೇಗವಾಗಿ ಹೊರಟಿದ್ದ ಟೆಂಪೋ. ಇದೇ ವೇಳೆ ಟ್ರಕ್ ಡಿಕ್ಕಿಯಾಗಿ ಅಪಘಾತ. ಅಪಘಾತದ ಭೀಕರತೆಗೆ ಸ್ಥಳದಲ್ಲೇ 9 ಜನರ ಮೃತ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಸಬ್ ಇನ್ಸ್ಪೆಕ್ಟರ್. ಶಿರಾ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತ ಶರೀರಗಳನ್ನು ಶಿರಾ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದಲ್ಲಿ ಕೃಷ್ಣಪ್ಪ, ಸುಜಾತ, ವಿನೋದ ಮತ್ತು ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳು. ಮೃತರೆಲ್ಲರೂ ರಾಯಚೂರಿನ ಸಿಂಧನೂರು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಟೆಂಪೋ ಟ್ರ್ಯಾಕ್ಸ್ ನಲ್ಲಿ 20 ಜನ ತೆರಳುತ್ತಿದ್ದರು. 20 ಜನರ ಪೈಕಿ 9 ಜನ ಸ್ಥಳದಲ್ಲಿ ಸಾವು. ಎದುರಿಗೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಹೋಗಿ ಲಾರಿಗೆ ಡಿಕ್ಕಿ. ಮೃತರೆಲ್ಲಾರು ರಾಯಚೂರು ಮೂಲದವರು ಅಪಘಾತ ಸಂಭವಿಸಿದೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಭೇಟಿ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು:
.ಮೋನಮ್ಮ(33), ಅನಿಲ್ ಕುಮಾರ್.(5), ಲಲಿತ( 35), ಸಂದೀಪ್ (4), ಬಾಲಾಜಿ(5), ವಿರೂಪಾಕ್ಷ(35), ದುರ್ಗಮ್ಮ(30), ದುರ್ಗಪ್ಪ(35).
ರಾಯಚೂರಿನ ಕುರುಕುಂದ ಗ್ರಾಮದಿಂದ ಹೊರಟಿದ್ದ ಕಾರ್ಮಿಕರು. ಸಂಜೆ 4.30ಕ್ಕೆ ಬೆಂಗಳೂರಿಗೆ ಹೊರಟಿದ್ದರು. ಕ್ರೂಸರ್‌ನಲ್ಲಿ ಸುಮಾರು 20-25 ಕಾರ್ಮಿಕರು ಇದ್ದ ಮಾಹಿತಿ. ಅಂದುಕೊಂಡಂತೆ ಆಗಿದ್ದರೆ ಸರಿಯಾಗಿ 5.30ಕ್ಕೆ ಕಾರ್ಮಿಕರು ಬೆಂಗಳೂರು ತಲುಪಬೇಕಿತ್ತು.
ಡ್ರೈವರ್ ಕೃಷ್ಣಪ್ಪನ ನಿರ್ಲಕ್ಷ್ಯದಿಂದ ದುರಂತ: ಚಾ ಕುಡಿದು ಬರ್ತಿನಿ ಅಂತೇಳಿ, ಎಣ್ಣೆ ಕುಡಿದು ಬಂದ ಕೃಷ್ಣಪ್ಪ. ರಾಯಚೂರಿನಿಂದ ಕಾರ್ಮಿಕರನ್ನು ಹೊತ್ತುಕೊಂಡು ಬಂದ ಕ್ರೂಸರ್ ಮಾರ್ಗ ಮಧ್ಯೆ ನಿಂತಿದೆ. ಸಮಯ ನಸುಕಿನ ಜಾವ 3.30. ಡ್ರೈವರ್ ಚಾ ಕುಡಿದು ಬರ್ತಿನಿ ಅಂತಾ ಹೇಳಿ ಹೋಗಿದ್ದ, ಆದರೆ ಚಾ ಬದಲು ಎಣ್ಣೆ ಕುಡಿದುಕೊಂಡು ಬಂದಿದ್ದ ಕುಡಿದು ಕ್ರೂಸರ್ ವೇಗವಾಗಿ ಓಡಿಸಿ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದ್ದಾನೆ ಅಂತಾ ಗಾಯಾಳು ಹೇಳಿಕೆ.
ಅಪಘಾತ ಆದಾಗ ಪ್ರಜ್ಞೆ ಇತ್ತು; ನನ್ತ ತಲಿ ಸೀಟಿನ ಕೆಳಗೆ ಸಿಕ್ಕಿಕೊಂಡಿತ್ತು:
ನಾನು ನನ್ನ ಗಂಡ, ತಂಗಿ, ತಂಗಿ ಗಂಡ, ಮಗು ಬಂದ್ವಿ. ತಂಗಿ,ತಂಗಿ ಮಗು,ತಂಗಿ ಗಂಡ ತಮ್ಮ ಕಾಣಿಸ್ತಿಲ್ಲ ಕುರುಕುಂದ ದಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರ್ತಿದ್ವಿ ಚಳಕೆರೆ ಡಾಬ ಬಳಿ ನಾವು ನಿದ್ದೆ ಮಾಡ್ತಿದ್ವಿ. ಚಾಲಕ ಸ್ಟೇರಿಂಗ್ ಮೇಲೆ ಮಲಗಿಕೊಂಡಿದ್ನಂತೆ ನಂತರ ಏನಾಯ್ತು ಅಂತಲೇ ಗೊತ್ತಾಗಿಲ್ಲ ಅಪಘಾತ ಆದಾಗ ಪ್ರಜ್ಙೆ ಇತ್ತು,ತಲೆ ಸೀಟಿನ ಕೆಳಗೆ ಸಿಕ್ಕಿಕೊಂಡಿತ್ತು. ಉಸಿರಾಡೋಕು ಕೂಡ ಸಾಕಷ್ಟು ಸಮಸ್ಯೆ ಆಗಿತ್ತು ಸತ್ತು ಹೋಗ್ತಿವಿ,ಸತ್ತು ಹೋಗ್ತಿವಿ ಎಂದು ಕಿರುಚಾಡ್ತಿದ್ರು. ವಾಹನಗಳು ಹೋಗ್ತಿದ್ವು ಆದ್ರೆ ಯಾರು ಕೂಡ ನೆರವಿಗೆ ಬರ್ಲಿಲ್ಲ ನನ್ನ ಗಂಡ ಕಾಲು ಗಾಡಿ ಒಳಗೆ ಸಿಕ್ಕಾಕಿಕೊಂಡಿತ್ತು ನೀರು..ನೀರು ಅಂತಿದ್ವಿ ಆಗ ಯಾರು ಕೊಡ್ತಾರೆ ನೀರು ಅಂತಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಲಲಿತಮ್ಮ ಗದ್ಗದಿತಾದಳು.
ಒಂದೇ ಕುಟುಂಬದ ಮೂವರ ಸಾವು:
ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರೂ ಮೃತಪಟ್ಟಿದ್ದಾರೆ. ಪವಾಡಸದೃಶವೆಂಬಂತೆ 5 ವರ್ಷದ ಕಂದ ಬದುಕುಳಿದಿದೆ. ಪ್ರಭುಸ್ವಾಮಿ, ರೇಖಾ ದಂಪತಿ ಜೊತೆ ವಿನೋದ್,ಸಂದೀಪ್ ಎಂಬ ಪುತ್ರರು ಬೆಂಗಳೂರಿಗೆ ಹೊರಟಿದ್ರು. ಅಪಘಾತದಲ್ಲಿ ಪ್ರಭುಸ್ವಾಮಿ, ರೇಖಾ,ವಿನೋದ್ ಸಾವು. ಬದುಕುಳಿದ ಓರ್ವ ಪುತ್ರ ಸಂದೀಪ್. ಸುದ್ದಿ ತಿಳಿದು ಬೆಂಗಳೂರಿನಿಂದ ಆಗಮಿಸಿರುವ ಸಂಬಂಧಿಕರು. ಮಗುವಿನ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಅಳಲು.
ಅಪ್ಪ ಅಮ್ಮ ಮನೆಯಲ್ಲಿದ್ದಾರೆ ಎಂದ ಕಂದ:
ನಾನು ಊರಿನಿಂದ ಅಪ್ಪ,ಅಪ್ಪ,ತಮ್ಮ ಜೊತೆಗೆ ಬಂದೆ. ಈಗ ಅಪ್ಪ ,ಅಮ್ಮ ಎಲ್ಲಾ ಮನೆಯಲ್ಲಿದ್ದಾರೆ ಎನ್ನುತ್ತಿರುವ ಸಂದೀಪ್. ಅಪಘಾತದಲ್ಲಿ ಮೃತಪಟ್ಟ ಸಂದೀಪ್ ತಂದೆ ಪ್ರಭು,ತಾಯಿ ರೇಖಾ,ತಮ್ಮ ವಿನೋದ್. ತುಮಕೂರು ಜಿಲ್ಲಾಸ್ಪತ್ರೆಯಿಂದ ಶಿರಾಗೆ ಮಗು ಕರೆದೊಯ್ದ ಸಂಬಂಧಿಕರು. ಶಿರಾದಲ್ಲಿರುವ ಕುಟುಂಬಸ್ಥರ ಮೃತದೇಹ.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಭೀಕರ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಮಗು ಸೇರಿ 9 ಕಾರ್ಮಿಕರು ಮೃತಪಟ್ಟ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ತಲಾ 2 ಲಕ್ಷ ರೂ. ಮತ್ತು ಈ ಅಪಘಾತದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ.