ಬಿಜೆಪಿಗೆ ಆಫರ್ ಕೊಟ್ಟ ಜೆಡಿಎಸ್ ನಾಯಕರು..!
ಆಡಳಿತರೂಢ ಬಿಜೆಪಿಗೆ ಜೆಡಿಎಸ್ ಪಕ್ಷ ಷರತ್ತುಬದ್ದ ಆಫರ್ ನೀಡಿದ್ದು, ಧರ್ಮೇಗೌಡರಿಂದ ತೆರವಾಗಿದ್ದ ಸ್ಥಾನವನ್ನು ತಮಗೇ ನೀಡಿ ಎಂದು ಬೇಡಿಕೆ ಇಟ್ಟಿದೆ. ಈ ಮೂಲಕ ಸಭಾಪತಿ ಸ್ಥಾನ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಹೆಚ್.ಡಿ. ಕುಮಾರಸ್ವಾಮಿ ಶಾಕ್ ನೀಡಿದ್ದಾರೆ.
ಬೆಂಗಳೂರು(ಜ.19): ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬೆಂಬಲ ಬೇಕಿದ್ದರೆ, ಪರಿಷತ್‌ನಲ್ಲಿ ಧರ್ಮೇಗೌಡರಿಂದ ತೆರವಾದ ಸ್ಥಾನ ಕೊಡಿ ಎಂದು ಆಡಳಿತರೂಢ ಬಿಜೆಪಿಗೆ ಜೆಡಿಎಸ್ ಬೇಡಿಕೆಯಿಟ್ಟಿದೆ. ಈ ಮೂಲಕ ಪರಿಸ್ಥಿತಿಯ ಲಾಭ ಪಡೆಯಲು ಜೆಡಿಎಸ್ ಮುಂದಾಗಿದೆ.
ಆಡಳಿತರೂಢ ಬಿಜೆಪಿಗೆ ಜೆಡಿಎಸ್ ಪಕ್ಷ ಷರತ್ತುಬದ್ದ ಆಫರ್ ನೀಡಿದ್ದು, ಧರ್ಮೇಗೌಡರಿಂದ ತೆರವಾಗಿದ್ದ ಸ್ಥಾನವನ್ನು ತಮಗೇ ನೀಡಿ ಎಂದು ಬೇಡಿಕೆ ಇಟ್ಟಿದೆ. ಈ ಮೂಲಕ ಸಭಾಪತಿ ಸ್ಥಾನ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಹೆಚ್.ಡಿ. ಕುಮಾರಸ್ವಾಮಿ ಶಾಕ್ ನೀಡಿದ್ದಾರೆ.
ಹೊಸ ಪ್ಲಾನ್ : ಜೆಡಿಎಸ್ ಪಕ್ಷ ವಿಸರ್ಜನೆ ಬಗ್ಗೆ ಮಾತಾಡಿದ ಎಚ್‌ಡಿಕೆ
ಪರಿಷತ್‌ನಲ್ಲಿ ಆಡಳಿತರೂಢ ಬಿಜೆಪಿ 31 ಸ್ಥಾನಗಳನ್ನು ಹೊಂದಿದೆ. ಇನ್ನು ಜೆಡಿಎಸ್ 13 ಪರಿಷತ್ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ನ ಸಭಾಪತಿಯನ್ನು ಕೆಳಗಿಳಿಸಲು ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕೇಬೇಕು. ಹೀಗಾಗಿ ಜೆಡಿಎಸ್ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.